ಧರಣಿ ಹಿಂಪಡೆಯಲು ಅಂಗನವಾಡಿ ನೌಕರರಿಗೆ ಸಿದ್ದು ಮನವಿ |News Mirchi

ಧರಣಿ ಹಿಂಪಡೆಯಲು ಅಂಗನವಾಡಿ ನೌಕರರಿಗೆ ಸಿದ್ದು ಮನವಿ

ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಫ್ರೀಡಂ ಪಾರ್ಕ್ ಬಳಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಅಂಗನವಾಡಿ ನೌಕರರು ಧರಣಿ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ಮನವಿ ಮಾಡಿದ್ದಾರೆ.

ದಿನಗೂಲಿ ನೌಕರರು, ಆಶಾ ಕಾರ್ಯಕರ್ತೆಯರು, ರೈತರ ಸಾಲ ಮನ್ನಾ ಬೇಡಿಕೆ ಸೇರಿದಂತೆ ಹಲವು ಬೆಡಿಕೆಗಳಿದ್ದು ಒಮ್ಮೆಲೇ ಸರ್ಕಾರದ ಕುತ್ತಿಗೆ ಮೇಲೆ ಕೂತರೆ ಹೇಗೆ? ಪ್ರತಿ ವರ್ಷವೂ ನಮ್ಮ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನವನ್ನು ಹೆಚ್ಚಳ ಮಾಡುತ್ತಿದೆ.

ಶೇ.90 ರಷ್ಟು ಅನುದಾನ ನೀಡುತ್ತಿದ್ದ ಕೇಂದ್ರ ಸರ್ಕಾರ ಈಗ ಅನುದಾನವನ್ನು ಶೇ.60 ಕ್ಕೆ ಇಳಿಸಿದೆ, ಹೀಗಾಗಿ ಸರ್ಕಾರದ ಮೇಲೆ ಹೆಚ್ಚು ಹೊರೆ ಬೀಳುತ್ತಿದೆ. ನಮ್ಮ ಅವಧಿಯಲ್ಲಿ ವೇತನದಲ್ಲಿ ರೂ.3,400 ರಷ್ಟು ಹೆಚ್ಚಳ ಮಾಡಿದ್ದೇವೆ ಎಂದರು. ಏಪ್ರಿಲ್ 19 ರಂದು ಅಂಗನವಾಡಿ ನೌಕರರ ಬೇಡಿಕೆಗಳ ಕುರಿತು ಚರ್ಚಿಸಲು ಸಭೆ ನಿಗಧಿಪಡಿಸಿದ್ದೇವೆ, ಹೀಗಾಗಿ ಧರಣಿ ಹಿಂಪಡೆಯಬೇಕು ಮನವಿ ಮಾಡಿದರು.

Loading...
loading...
error: Content is protected !!