ಮಂಗಳೂರು: ನಾಲ್ವರು ದನಗಳ್ಳರ ಬಂಧನ – News Mirchi

ಮಂಗಳೂರು: ನಾಲ್ವರು ದನಗಳ್ಳರ ಬಂಧನ

ಮಂಗಳೂರು: ಗೋವು ಕಳ್ಳತನ ಸೇರಿದಂತೆ ಹಲವು ಕಳುವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಕುಖ್ಯಾತ ಕಳ್ಳರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮೊಹಮದ್ ಅಜಬ್(21), ಚೆಂಬುಗುಡ್ಡೆಯ ಹಿದಾಯತ್(22), ಮಂಜನಾಡಿಯ ಮುತಾಲಿಬ್(38) ಮತ್ತು ಚೆಂಬುಗುಡ್ಡೆಯ ಅಬ್ದುಲ್ ಕರೀಮ್ ಬಂಧಿತರು. ಇದೇ ಗ್ಯಾಂಗ್ ನ ಚೆಂಬುಗುಡ್ಡೆಯ ಸಲೀಮ್ ತಲೆಮರೆಸಿಕೊಂಡಿದ್ದಾನೆ.

ಬಂಧಿತರಿಂದ ಎರಡು ಬೈಕು ಮತ್ತು ಒಂದು ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಕೊಣಾಜೆ, ಸೂರತ್ಕಲ್, ಉಳ್ಳಾಲ, ಮಂಗಳೂರು ಉತ್ತರ, ಪುತ್ತೂರು ಮತ್ತು ಕಡಬಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

ಇತ್ತೀಚೆಗೆ ಆರೋಪಿಗಳು ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ದನಗಳನ್ನು ಮತ್ತು ಎರಡು ಬೈಕುಗಳನ್ನು ಕದ್ದಿದ್ದರು. ಕಣ್ಣೂರು ಬಳಿಯ ಮನೆಯೊಂದರಲ್ಲಿ ದರೋಡೆಗೆ ಅರೋಪಿಗಳು ಪ್ರಯತ್ನಿಸಿದ್ದರು ಎಂಬ ಆರೋಪವು ಇವರ ಮೇಲಿದೆ. ಇವರ ಬಂಧನದೊಂದಿಗೆ ಒಟ್ಟು 7 ಕಳುವು ಪ್ರಕರಣಗಳನ್ನು ಪೊಲೀಸರು ಭೇದಿಸಿದಂತಾಗಿದೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!