ಕೇಂದ್ರ, ರಾಜ್ಯ ಸರ್ಕಾರಗಳು ಕೆಸರೆರಚಾಟ ನಿಲ್ಲಿಸಿ ಸಂಕಷ್ಟದಲ್ಲಿರುವ ರೈತರತ್ತ ಗಮನ ಹರಿಸಲಿ : ಹೆಚ್.ಡಿ.ಡಿ – News Mirchi

ಕೇಂದ್ರ, ರಾಜ್ಯ ಸರ್ಕಾರಗಳು ಕೆಸರೆರಚಾಟ ನಿಲ್ಲಿಸಿ ಸಂಕಷ್ಟದಲ್ಲಿರುವ ರೈತರತ್ತ ಗಮನ ಹರಿಸಲಿ : ಹೆಚ್.ಡಿ.ಡಿ

ಚಿತ್ರದುರ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಸರೆರಚಾಟ ಮಾಡುವ ಬದಲು ಸಂಕಷ್ಟದಲ್ಲಿರುವ ರೈತರತ್ತ ಗಮನ ಹರಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ತಾಲೂಕಿನ ಭರಮ ಸಾಗರದಲ್ಲಿ ಕೀಟಬಾಧೆಯಿಂದ ನಾಶವಾಗಿರುವ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯ ಸರ್ಕಾರ ಟಿಪ್ಪು ಜಯಂತಿ ವಿವಾದ ಎಬ್ಬಿಸಿ ಕಾಲಹರಣ ಮಾಡುವ ಬದಲು  ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲಿ ಎಂದರು. ಈ ಭಾಗದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ರೈತರ ಬೆಳೆಗಳನ್ನು ಪರಿಶೀಲಿಸಿದ್ದೇನೆ. ಕೀಟಬಾಧೆಯಿಂದ ಮೆಕ್ಕೆಜೋಳ ಹಾಳಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಫಸಲು ನಾಶವಾಗಿದೆ. ಇದೀಗ ಏನೂ ಸಿಗದಂತಾಗಿದೆ ಎಂದರು.

ಈ ಹಿಂದೆ ಹಿರಿಯೂರು ಭಾಗದ ತೆಂಗು, ಅಡಿಕೆ ತೋಟಗಳಿಗೆ ಭೇಟಿ ನೀಡಿ ಬೆಳೆನಷ್ಟದ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೆ. ಕೃಷಿ ಸಚಿವರಿಗೆ ಕೇಂದ್ರದ ಗಮನಕ್ಕೂ ತಂದಿದ್ದೆ. ಆದರೆ ಕೇಂದ್ರದ ಕೃಷಿ ಸಚಿವರು ರಾಜ್ಯಕ್ಕೆ ಪತ್ರ ಬರೆದು ಈಗಾಗಲೇ ನೀಡಿರುವ ಬೆಳೆ ನಷ್ಟದ ಪರಿಹಾರದ ಹಣದಲ್ಲೇ ತೋಟದ ಬೆಳೆಹಾನಿ ಪರಿಹಾರ ಎಂದು ಸೇರಿಸಿ ಎಂದು ಪ್ರತಿಕ್ರಿಯಿಸಿರುವುದು ಬೇಸರ ತಂದಿದೆ ಎಂದರು.

Loading...