ಶಾಂತಿ ಕದಡಿದರೆ ಮುಲಾಜಿಲ್ಲದೇ ಕ್ರಮ : ಸಿಎಂ – News Mirchi

ಶಾಂತಿ ಕದಡಿದರೆ ಮುಲಾಜಿಲ್ಲದೇ ಕ್ರಮ : ಸಿಎಂ

ಬೆಂಗಳೂರು, ಅ.24: ಟಿಪ್ಪು ಜಯಂತಿ ಸಂದರ್ಭದಲ್ಲಿ ಶಾಂತಿ ಕದಡಿದರೆ ನಿರ್ದಾಕ್ಷಿಣ್ಯವಾಗಿ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಗೃಹಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಜೊತೆ ಮಾತನಾಡಿದ ಅವರು ಬಿಜೆಪಿಯವರು ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಗೊಂದಲ ಸೃಷ್ಟಿಸುತ್ತಿದ್ದಾರೆ. ಬಿಜೆಪಿಯವರು ಹಿಂದೆ ಟಿಪ್ಪುವನ್ನು ಹಾಡಿ ಹೊಗಳಿದ್ದರು. ಇದೀಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಟಿಪ್ಪು ಹುಟ್ಟಿದ್ದೇ ಕರ್ನಾಟಕದಲ್ಲಿ. ಇತಿಹಾಸ ತಿರುಚುವ ಕೆಲಸ ಬೇಡ ಎಂದರು.

ಟಿಪ್ಪು ಜಯಂತಿ ಆಚರಿಸುವವರನ್ನು ಗಲ್ಲಿಗೇರಿಸಬೇಕು ಎಂದಿದ್ದ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಂಸದರಾಗುವಾಗ ಪ್ರಮಾಣ ವಚನದ ವೇಳೆ ಸಂವಿಧಾನಕ್ಕೆ ಗೌರವ ಕೊಡುತ್ತೇವೆ ಎಂದವರು ಈಗ ಮರೆತಂತಿದೆ. ಸಂವಿಧಾನದ ಕುರಿತು ಗೌರವ ಇಲ್ಲದವರು ಈ ರೀತಿ ಮಾತನಾಡುತ್ತಾರೆ ಎಂದರು. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದರು. ಆಗ ಒಂದು ನಾಲಿಗೆ ಈಗ ಒಂದು ನಾಲಿಗೆ ಎಂದು ಕಿಡಿಕಾರಿದರು. ಏನೇ ವಿರೋಧ ಬಂದರೂ ಟಿಪ್ಪು ಜಯಂತಿಯನ್ನು ಆಚರಿಸಿಯೇ ಆಚರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

Loading...