ಏಪ್ರಿಲ್ ಅಂತ್ಯ, ಮೇ ಮೊದಲ ವಾರದಲ್ಲಿ ಚುನಾವಣೆ ಸಾಧ್ಯತೆ? – News Mirchi

ಏಪ್ರಿಲ್ ಅಂತ್ಯ, ಮೇ ಮೊದಲ ವಾರದಲ್ಲಿ ಚುನಾವಣೆ ಸಾಧ್ಯತೆ?

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಪಕ್ಷಗಳ ಪ್ರಮುಖರಿಂದ ದಿನದಿಂದ ದಿನಕ್ಕೆ ಕೆಸರೆರಚಾಟ, ಆರೋಪ ಪ್ರತ್ಯಾರೋಪಗಳು ನಡೆಯುತ್ತಿರುವ ಬೆನ್ನಲ್ಲೇ ರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದೆ. ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರದಲ್ಲಿಯೇ ಚುನಾವಣೆ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕಳೆದ ಬಾರಿಗಿಂತ ಮೂರು ದಿನ ಮೊದಲೇ ಚುನಾವಣೆ ನಡೆಸಲು ಆಯೋಗ ಸಿದ್ಧತೆ ನಡೆಸಿದ್ದು 2018ರ ಮೇ.2ರಂದು ಚುನಾವಣೆ ನಡೆಸುವ ಸಾಧ್ಯತೆ ಇದೆ.

ಕೇಂದ್ರ ಚುನಾವಣಾ ಆಯೋಗ ಏಪ್ರಿಲ್ ಅಂತ್ಯದೊಳಗೆ ನಿಮ್ಮೆಲ್ಲಾ ಯೋಜನೆಗಳು ಪೂರ್ಣವಾಗುವಂತೆ ನೋಡಿಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ರಾಜ್ಯ ಸರ್ಕಾರದ ಅವಧಿ 2018ರ ಮೇ.18 ಕ್ಕೆ ಅಂತ್ಯವಾಗಲಿದ್ದು, ಅದಕ್ಕೂ ಮೊದಲೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಸಿದ್ಧತೆ ನಡೆಸಿದೆ. ಚುನಾವಣಾ ವೇಳೆ ಪರೀಕ್ಷೆಗಳು ಎದುರಾಗದಂತೆ ಕ್ರಮವಹಿಸಲು ಶಿಕ್ಷಣ ಇಲಾಖೆಯ ಸಭೆ ನಡೆಸಿ ಚರ್ಚೆ ನಡೆಸಿದ್ದು, ಚುನಾವಣಾ ಕೆಲಸದಲ್ಲಿ ಶಿಕ್ಷಕರು ಭಾಗಿಯಾಗುವುದರಿಂದ ಪರೀಕ್ಷೆಗೆ ತೊಂದರೆಯಾಗದಂತೆ ದಿನಾಂಕ ಪ್ರಕಟಿಸಲು ಚುನಾವಣಾ ಆಯೋಗಕ್ಕೆ ಮನವಿ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

2013ರ ಮೇ.5ರಂದು ಚುನಾವಣೆ ನಡೆದಿತ್ತು. 2018ರಲ್ಲಿ ಇದಕ್ಕೂ ಮೊದಲೇ ಮುಹೂರ್ತ ನಿಗದಿಯಾಗುವ ಸಾಧ್ಯತೆ ಇದೆ.

Get Latest updates on WhatsApp. Send ‘Add Me’ to 8550851559

Loading...