ವಿಧಾನ ಸೌಧದಲ್ಲಿ ಫೋಟೋ ಸೆಷನ್ ನಲ್ಲಿ ಹಿಂಬದಿ ಸಾಲಿನಲ್ಲಿ ಸ್ಥಳ: ಹೆಚ್.ಡಿ.ಕೆ ಆಕ್ರೋಶ – News Mirchi

ವಿಧಾನ ಸೌಧದಲ್ಲಿ ಫೋಟೋ ಸೆಷನ್ ನಲ್ಲಿ ಹಿಂಬದಿ ಸಾಲಿನಲ್ಲಿ ಸ್ಥಳ: ಹೆಚ್.ಡಿ.ಕೆ ಆಕ್ರೋಶ

ಬೆಂಗಳೂರು :  ವಿಧಾನ ಸೌಧದ ವಜ್ರಮಹೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರೊಂದಿಗೆ ಉಭಯಸದನಗಳ ಶಾಸಕರ ಫೋಟೋ ಸೆಷನ್ ನಲ್ಲಿ ಹಿಂಬದಿಯ ಸಾಲಿನಲ್ಲಿ ಸ್ಥಾನ ನೀಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿ ಗೈರು ಹಾಜರಾಗಿದ್ದಾರೆ.

ರಾಷ್ಟ್ರಪತಿಯವರ ಭಾಷಣ ಮುಗಿದ ಬಳಿಕ ವಿಧಾನ ಸೌಧ ಮತ್ತು ವಿಕಾಸ ಸೌಧದ ಮಧ್ಯೆ ಇರುವ ಮಹಾತ್ಮಾ ಗಾಂಧಿ ಪ್ರತಿಮೆ ಮುಂಭಾಗ ಏರ್ಪಡಿಸಿದ ಸಾಮೂಹಿಕ ಫೋಟೋ ಸೆಷನ್ ಆಕ್ರೋಶಕ್ಕೆ ವೇದಿಕೆಯಾಯಿತು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನ ಬಹುತೇಕ ಶಾಸಕರು ರಾಷ್ಟ್ರಪತಿಯೊಂದಿಗೆ ಫೋಟೋ ತೆಗೆಸಿಕೊಂಡರು. ರಾಷ್ಟ್ರಪತಿಗಳು  ಗಾಂಧಿ ಪ್ರತಿಮೆ ಬಳಿ ಆಗಮಿಸುವ ಮೊದಲೇ ಶಾಸಕರು ಬಂದು ಆಸೀನರಾಗಿದ್ದರು.

ಇದೇ ವೇಳೆ ವಿಧಾಸೌಧ ವಜ್ರಮಹೋತ್ಸವವನ್ನು ದುಂದುವೆಚ್ಚ ಮಾಡಿ ಆಚರಿಸಿದ್ದಕ್ಕೆ ಅಸಮಾಧಾನ ಹೆಚ್ಚಿದ್ದು, ಗುಟುಕು ನೀರು ಕುಡಿಯದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.  ದುಂದು ವೆಚ್ಚದ ಪಾಲು ನಮಗೆ ಬೇಡ ಎಂದಿರುವುದರಿಂದ ಜೆಡಿಎಸ್ ನವರು ಉಳಿದ ಕಾರ್ಯಕ್ರಮಗಳಿಂದ ದೂರವುಳಿದಿದ್ದಾರೆ ಎನ್ನಲಾಗಿದೆ.

Get Latest updates on WhatsApp. Send ‘Add Me’ to 8550851559

Loading...