ಬಹುಕೋಟಿ ಛಾಪಾ ಕಾಗದದ ಕಿಂಗ್ ಪಿನ್ ಕರೀಂಲಾಲ್ ತೆಲಗಿ ಸಾವು |News Mirchi

ಬಹುಕೋಟಿ ಛಾಪಾ ಕಾಗದದ ಕಿಂಗ್ ಪಿನ್ ಕರೀಂಲಾಲ್ ತೆಲಗಿ ಸಾವು

ಬೆಂಗಳೂರು :  ಬಹುಕೋಟಿ ಛಾಪಾ ಕಾಗದ ಹಗರಣದ ಕಿಂಗ್ ಪಿನ್  ಕರೀಂ ಲಾಲ್ ತೆಲಗಿ ಮೃತಪಟ್ಟಿದ್ದಾನೆ. ಈತ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಆತನನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಅ.16ರಂದು ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಸಂಜೆ 4ಗಂಟೆ ಸುಮಾರಿಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

2006ರಿಂದ ಛಾಪಾ ಕಾಗದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ. ಈಗ 11  ವರ್ಷ ಶಿಕ್ಷೆ ಪೂರ್ಣಗೊಂಡಿತ್ತು. 30 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

 

 

 

Get Latest updates on WhatsApp. Send ‘Add Me’ to 8550851559

Loading...
loading...
error: Content is protected !!