ತುಘಲಕ್ ದರ್ಬಾರ್ ನಡೆಸುತ್ತಿರುವ ಸಿಎಂಗೆ ಜನತೆ ತಕ್ಕ ಪಾಠ ಕಲಿಸಿ : ಬಿ.ಎಸ್.ಯಡಿಯೂರಪ್ಪ – News Mirchi

ತುಘಲಕ್ ದರ್ಬಾರ್ ನಡೆಸುತ್ತಿರುವ ಸಿಎಂಗೆ ಜನತೆ ತಕ್ಕ ಪಾಠ ಕಲಿಸಿ : ಬಿ.ಎಸ್.ಯಡಿಯೂರಪ್ಪ

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಖಜಾನೆಯನ್ನು ಲೂಟಿ ಮಾಡಿ ಸರ್ವನಾಶ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.

ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ರೈತ ಸಮಾವೇಶದಲ್ಲಿ ಪಾಲ್ಗೊಂಡ ಯಡಿಯೂರಪ್ಪ ಮಾತನಾಡಿ ಯಾವುದೇ ಕಾಮಗಾರಿಯನ್ನು ಮನ ಬಂದಂತೆ ಎಸ್ಟಿಮೇಟ್ ಮಾಡಿ ಸರ್ಕಾರದ ಖಜಾನೆಯನ್ನು ಲೂಟಿ ಮಾಡಿ ಸರ್ವನಾಶ ಮಾಡುತ್ತಿದ್ದಾರೆ. ಆರೋಪ ಸುಳ್ಳು ಎಂದಾದರೆ ಚಾಮರಾಜನಗರ ಜಿಲ್ಲೆಯ ಎಸ್ಟಿಮೇಟ್ ತೆಗೆದು ನೋಡಲಿ ಎಂದರು. ಮುಖ್ಯಮಂತ್ರಿಗಳು ಜನಹಿತವನ್ನು ಮರೆತಿದ್ದಾರೆ. ದೇವರು ಕ್ಷಮಿಸಿದರೂ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಜನತೆ ಕ್ಷಮಿಸಬಾರದು. ಅಧಿಕಾರದ ಮದ, ಹಣದ ಮದ, ಜಾತಿಯ ವಿಷಬೀಜ ಬಿತ್ತಿ ಚುನಾವಣೆ ಗೆಲ್ಲಬಹುದು ಎಂದುಕೊಂಡ ನಿಮಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.

ಮೂರೂವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ರೈತರ ಪಾಲಿಗೆ ಸತ್ತಿದ್ದೀರೋ ಬದುಕಿದ್ದೀರೋ ಎಂದು ಕೇಳಿಲ್ಲ. ಬಡವರಿಗೆ ನೀಡಿದ ಸಾವಿರಾರು ಕೋ.ರೂ.ಅಕ್ಕಿ ಗೋಧಿ ಕೊಳೆಯುತ್ತಿದೆ. ಜನಹಿತ ಮರೆತು ತುಘಲಕ್ ದರ್ಬಾರ್ ಮಾಡುತ್ತಿರುವ ಸಿಎಂ ಗೆ ಪಾಠ ಕಲಿಸಬೇಕಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರೈತರಿಗೆ ಸಾವಯವ ಕೃಷಿಯ ಮಹತ್ವ ತಿಳಿಸಿದ್ದನ್ನು ಸ್ಮರಿಸಿಕೊಂಡ ಯಡಿಯೂರಪ್ಪ ರೈತರು ಸಾವಯವ ಕೃಷಿಯನ್ನು ಮಾಡಿ ಭೂಮಿಯ ಫಲವತ್ತತೆಯನ್ನು ಕಾಯ್ದುಕೊಂಡು ಹೋಗಬೇಕು ಎಂದರು. ಮುಂದಿನ ತಿಂಗಳು 2ರಿಂದ ಸುವರ್ಣ ಕರ್ನಾಟಕದ ಕನಸನ್ನು ನನಸು ಮಾಡಲು ಮೂರುತಿಂಗಳ ಕಾಲ ರಾಜ್ಯದ 224 ಕ್ಷೇತ್ರಕ್ಕೆ ಕೆಂದ್ರದ ಸಚಿವರು ಬೇರೇ ಬೇರೇ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಗಳು ಸೇರಿ ಪ್ರವಾಸ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಸಮಾವೇಶ ನಡೆಯಲಿದ್ದು ಜ.28ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Get Latest updates on WhatsApp. Send ‘Add Me’ to 8550851559

Loading...