ವಿಧಾನಸೌಧ ವಜ್ರಮಹೋತ್ಸವ ಅವ್ಯವಸ್ಥೆಯ ಆಗರವಾಗಿತ್ತು : ಜಗದೀಶ್ ಶೆಟ್ಟರ್ – News Mirchi

ವಿಧಾನಸೌಧ ವಜ್ರಮಹೋತ್ಸವ ಅವ್ಯವಸ್ಥೆಯ ಆಗರವಾಗಿತ್ತು : ಜಗದೀಶ್ ಶೆಟ್ಟರ್

ಬೆಂಗಳೂರು :  ವಿಧಾನಸೌಧ ವಜ್ರಮಹೋತ್ಸವ ಆಚರಣೆಯಿಂದ ಜನರಿಗೆ ಯಾವುದೇ ಅನುಕೂಲ ಆಗಿಲ್ಲ. ರಾಷ್ಟ್ರಪತಿಗಳಿಗೂ ಅವಮಾನ ರೀತಿಯಲ್ಲಿ ಕಾರ್ಯಕ್ರಮ ನಡೆಯಿತು ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಜಗದೀಶ್ ಶೆಟ್ಟರ್ ದೂರಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಸರ್ಕಾರಕ್ಕೆ ಎಲ್ಲ ಜಾತಿಯವರೂ ನೆನಪಾಗುತ್ತಿದ್ದಾರೆ. ಬ್ರಾಹ್ಮಣರ ಅಭಿವೃದ್ಧಿ ಪ್ರಾಧಿಕಾರ ಚುನಾವಣಾ ಗಿಮಿಕ್. ಈ ಗಿಮಿಕ್ ಗಳನ್ನು ಜನ ನಂಬುವುದಿಲ್ಲ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಇದು ಪಕ್ಕಾ ಚುನಾವಣಾ ಗಿಮಿಕ್. ಅಧಿಕಾರಕ್ಕೆ ಬಂದಾಗಲೇ ಈ ಪ್ರಾಧಿಕಾರ ರಚಿಸಿದ್ದರೆ ನಂಬಬಹುದಿತ್ತು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಸರ್ಕಾರ ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂದರು. ರಾಷ್ಟ್ರಪತಿಗಳ ಭಾಷಣ ವಿಚಾರದಲ್ಲೂ ಗೊಂದಲವಾಗಿದ್ದು, ಸರ್ಕಾರ ತನಗೆ ಬೇಕಾದಂತೆ ಮಾಹಿತಿ ನೀಡಿ ಭಾಷಣವನ್ನು ಗೊಂದಲ ಗೂಡಾಗಿಸಿದೆ.

ವಜ್ರಮಹೋತ್ಸವ ಸಮಾರಂಭದ ಕುರಿತು ಸಂಪುಟದಲ್ಲೂ ಚರ್ಚೆ ಆಗಿಲ್ಲ. ಕಾರ್ಯಕ್ರಮದ ಸ್ವರೂಪದ ಕುರಿತೂ ತೀರ್ಮಾನಗಳಾಗಿಲ್ಲ. ಅವ್ಯವಸ್ಥೆಯ ಆಗರವಾಗಿತ್ತು. ವಜ್ರಮಹೋತ್ಸವದ ಅಧ್ವಾನಗಳ ಕುರಿತು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸತ್ತೇನೆ ಎಂದು ತಿಳಿಸಿದರು.

 

 

 

 

 

 

Get Latest updates on WhatsApp. Send ‘Add Me’ to 8550851559

Loading...