ವಿಧಾನಮಂಡಲ ಅಧಿವೇಶನದಲ್ಲಿ ನಾಲ್ಕು ಪ್ರಮುಖ ವಿಧೇಯಕಗಳು ಮಂಡನೆಯಾಗಲಿವೆ : ಟಿ.ಬಿ.ಜಯಚಂದ್ರ – News Mirchi

ವಿಧಾನಮಂಡಲ ಅಧಿವೇಶನದಲ್ಲಿ ನಾಲ್ಕು ಪ್ರಮುಖ ವಿಧೇಯಕಗಳು ಮಂಡನೆಯಾಗಲಿವೆ : ಟಿ.ಬಿ.ಜಯಚಂದ್ರ

ಬೆಂಗಳೂರು : ಬೆಳಗಾವಿಯಲ್ಲಿ ನ.13ರಿಂದ ನಡೆಯಲಿರುವ 10ದಿನಗಳ ವಿಧಾನಮಂಡಲ ಅಧಿವೇಶನದಲ್ಲಿ ಮೌಢ್ಯ ನಿಷೇಧ ವಿಧೇಯಕ ಸೇರಿದಂತೆ ನಾಲ್ಕು ಪ್ರಮುಖ ವಿಧೇಯಕಗಳನ್ನು ಮಂಡಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಂಬಳ ಆಚರಣೆಗೆ ಸಂಬಂಧಿಸಿದ ವಿಧೇಯಕ, ಪರಿಶಿಷ್ಟಜಾತಿ, ವರ್ಗದ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ಸೌಲಭ್ಯ ವಿಧೇಯಕ ಮಂಡಿಸಲಾಗುವುದು. ಸರ್ಕಾರ ಮುಂಬಡ್ತಿ ಮೀಸಲಾತಿ ವಿರುದ್ಧ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಪರಿಶಿಷ್ಟಜಾತಿ, ವರ್ಗದ ನೌಕರರ ಹಿತರಕ್ಷಣೆ ಕಾಪಾಡಲು ಮುಂದಾಗಿದೆ.

ಸರ್ಕಾರ ಹೊರಡಿಸಿದ್ದ ಕಂಬಳ ಆಚರಣೆ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಧೇಯಕವನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು. ವಾಸಿಸುವವನೇ ಮನೆಯೊಡೆಯ ವಿಧೇಯಕಕ್ಕೂ ರಾಷ್ಟ್ರಪತಿಗಳು ಒಪ್ಪಿಗೆ ನೀಡಿದ್ದಾರೆ. ಈ ವಿಧೇಯಕವೂ ಮಂಡನೆಯಾಗಲಿದೆ. ನ.13ರಿಂದ 10ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಅವಧಿಯನ್ನು ವಿಸ್ತರಿಸುವುದು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Get Latest updates on WhatsApp. Send ‘Add Me’ to 8550851559

Loading...