ಸಿಬಿಐ ಕೇಂದ್ರದ ನಿರ್ದೇಶನದಂತೆ ಕೆಲಸಮಾಡಲ್ಲ : ಪ್ರಕಾಶ್ ಜಾವ್ಡೇಕರ್ – News Mirchi

ಸಿಬಿಐ ಕೇಂದ್ರದ ನಿರ್ದೇಶನದಂತೆ ಕೆಲಸಮಾಡಲ್ಲ : ಪ್ರಕಾಶ್ ಜಾವ್ಡೇಕರ್

ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ಅವರನ್ನು ಸ್ಥಾನದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.

ಲೋಕಾಯುಕ್ತ ಐಜಿಪಿ ಪ್ರಣವ್ ಮೊಹಾಂತಿ, ಕಾನೂನು ಸುವ್ಯವಸ್ಥೆ ಎಡಿಜಿಪಿ ಎ.ಎಂ.ಪ್ರಸಾದ್, ಸಚಿವ ಕೆ,ಜೆ.ಜಾರ್ಜ್ ವಿರುದ್ಧ ಸಿಬಿಐ ಎಫ್ ಐ.ಆರ್ ದಾಖಲಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಬಾರಿಯೂ ಭ್ರಷ್ಟರನ್ನು ರಕ್ಷಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಜ್ ಅವರನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನ ಫಲಿಸಲ್ಲ ಎಂದಿದ್ದಾರೆ.

ಸಿಬಿಐ ಕೇಂದ್ರದ ನಿರ್ದೇಶನದಂತೆ ಎಫ್ ಐ ಆರ್ ದಾಖಲಿಸಲಾಗಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಎಫ್ ಐ ಆರ್ ದಾಖಲಿಸಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೆಲಸ ಮಾಡಿದೆ. ಸಿಬಿಐ ಕೇಂದ್ರದ ನಿರ್ದೇಶನದಂತೆ ಕೆಲಸಮಾಡಲ್ಲ ಎಂದು ಸ್ಪಷ್ಟಪಡಿಸಿದರು.

 

 

Get Latest updates on WhatsApp. Send ‘Add Me’ to 8550851559

Loading...