ಸಚಿವ ಜಾರ್ಜ್ ಅವರ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತ : ಸಚಿವ ರಾಮಲಿಂಗಾರೆಡ್ಡಿ – News Mirchi

ಸಚಿವ ಜಾರ್ಜ್ ಅವರ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತ : ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ಸಚಿವ ಜಾರ್ಜ್ ಅವರ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತ, ಸಚಿವ ಜಾರ್ಜ್ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ  ಮಾತನಾಡಿದ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜೀನಾಮೆ ನೀಡುವ ಅಗತ್ಯವಿದೆ. ಯಾಕೆಂದರೆ ಅಮಿತ್ ಷಾ ಪುತ್ರ ಜಯ್ ಷಾ ಮೇಲೆ ಅಕ್ರಮ ಗಳಿಕೆ ಆರೋಪ ಕೇಳಿ ಬಂದಿದೆ. ಅಮಿತ್ ಷಾ ಮೊದಲು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು. ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಸಂಸದ ಪ್ರಹ್ಲಾದ್ ಜೋಶಿ ಅವರ ಸಹೋದರನ ಮೇಲೆ ಹುಡ್ಕೋ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದ್ದು ಇವರೆಲ್ಲ ರಾಜೀನಾಮೆ ನೀಡಿದ್ದಾರಾ ಎಂದು ಪ್ರಶ್ನಿಸಿದರು.

 

Get Latest updates on WhatsApp. Send ‘Add Me’ to 8550851559

Loading...