ಸೆಲ್ಫಿ ಮೋಹಕ್ಕೆ ಇಬ್ಬರು ಮಹಿಳೆಯರು ಬಲಿ

ಕೊರಾಪುಟ್ : ಇತ್ತೀಚಿನ ದಿನಗಳಲ್ಲಿ ಸೆಲ್ಫಿ ಮೋಹ ಹೆಚ್ಚುತ್ತಿದ್ದು ಲಿಂಗಭೇದವಿಲ್ಲದೇ ಸೆಲ್ಫಿ ಹುಚ್ಚಿಗೆ ಬಲಿಯಾಗುತ್ತಿದ್ದಾರೆ. ಒಡಿಶಾ ನಗರದ ರಾಯಗಡದಲ್ಲಿ ಸೆಲ್ಫಿ ಮೋಹಕ್ಕೆ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ.

ಮೃತಮಹಿಳೆಯರನ್ನು ಜ್ಯೋತಿ (27)ಶ್ರೀದೇವಿ(23)ಎಂದು ಗುರುತಿಸಲಾಗಿದೆ. ಇವರು ಆಂಧ್ರಪ್ರದೇಶದವರಾಗಿದ್ದು, ನಾಗಬಲಿ ನದಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಮುಳುಗಿ ಸಾವನ್ನಪ್ಪಿದ್ದಾರೆ. ರಾಯಗಡಕ್ಕೆ ಒಂಭತ್ತು ಮಹಿಳೆಯರಿದ್ದ ತಂಡ ವಿಶಾಖಪಟ್ಟಣದಿಂದ ಪ್ರವಾಸಕ್ಕೆ ಬಂದಿತ್ತು. ಹೊರವಲಯದಲ್ಲಿರುವ ನಾಗಬಲಿ ನದಿಯ ಸೇತುವೆ ಬಳಿ ಸಾಕಷ್ಟು ಸೆಲ್ಫಿ ಫೋಟೋಗಳನ್ನು ತೆಗೆದುಕೊಂಡಿದ್ದರು. ನಂತರ ಮತ್ತೂ ಹೆಚ್ಚು ಫೋಟೋ ಕ್ಲಿಕ್ಕಿಸಿಕೊಳ್ಳಲು ನದಿಗೆ ಇಳಿದ ವೇಳೆ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಸ್ಥಳೀಯರ ನೆರವಿನಿಂದ ಶವಗಳನ್ನು ಹೊರ ತೆಗೆಯಲಾಗಿದೆ.

 

 

Get Latest updates on WhatsApp. Send ‘Add Me’ to 8550851559