‘ಮರ್ಸೆಲ್’ ಚಿತ್ರ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ – News Mirchi

‘ಮರ್ಸೆಲ್’ ಚಿತ್ರ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಚೆನ್ನೈ :  ತಮಿಳು ನಟ ವಿಜಯ್ ಅಭಿನಯದ ‘ಮರ್ಸೆಲ್’ ಚಿತ್ರ ಅ.18ರಂದು ಬಿಡುಗಡೆಯಾಗಿತ್ತು. ಈ ಚಿತ್ರವನ್ನು ರದ್ದುಪಡಿಸಬೇಕೆಂದು ಕೋರಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರ ಹಕ್ಕಾಗಿದೆ. ಅದು ಸಿನಿಮಾವೇ ಹೊರತು ನಿಜ ಜೀವನವಲ್ಲ ಎಂದು ಕೋರ್ಟ್ ತಿಳಿಸಿದ್ದು, ನ್ಯಾಯಪೀಠ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದೆ.  ಚಿತ್ರದ ಪ್ರದರ್ಶನ ರದ್ದುಪಡಿಸುವುದಿಲ್ಲ ಎಂದು ತಿಳಿಸಿದೆ.

ತಮಿಳುನಾಡು ಬಿಜೆಪಿ ಘಟಕ ಕೇಂದ್ರ ಸರ್ಕಾರದ ಜಿಎಸ್ ಟಿ ಹಾಗೂ ನೋಟು ರದ್ಧತಿಗೆ ಸಂಬಂಧಿಸಿದ ಕೆಲವು ದೃಶ್ಯಗಳನ್ನು ಚಿತ್ರದಿಂದ ತೆಗೆಯಬೇಕೆಂದು ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.  ಚಿತ್ರದಲ್ಲಿ ಜಿಎಸ್ ಟಿ ತೆರಿಗೆಯನ್ನು ಪ್ರಶ್ನಿಸಲಾಗಿದ್ದು, ಸಿಂಗಪುರದಲ್ಲಿ ತೆರಿಗೆ ಶೇ.8, ಭಾರತದಲ್ಲಿ 28 ಯಾಕೆ ಎಂದು ವಿಜಯ್ ಪ್ರಶ್ನಿಸಿದ್ದು, ಜಿಎಸ್ ಟಿ ಅಡಿ ಮದ್ಯವನ್ನು ಯಾಕೆ ಅಳವಡಿಸಿಲ್ಲ ಎಂದಿದ್ದಾರೆ.

ಸಿನಿಮಾದಲ್ಲಿನ ರಾಜಕೀಯ ಅಂಶಗಳನ್ನು ಕೈಬಿಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬಿಜೆಪಿ ಎಚ್ಚರಿಕೆ ನೀಡಿತ್ತು. ಬಿಜೆಪಿ ಚಿತ್ರವನ್ನು ವಿರೋಧಿಸಿದರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪಿ.ಚಿದಂಬರಮ್, ನಟ ರಜನಿಕಾಂತ್, ಕಮಲ್ ಹಾಸನ್ ಬೆಂಬಲಿಸಿದ್ದರು.

 

 

 

 

Get Latest updates on WhatsApp. Send ‘Add Me’ to 8550851559

Loading...