ಸಚಿವರಿಗೆ ಬೆದರಿಕೆ ಹಿನ್ನೆಲೆ ಪತ್ರಕರ್ತನ ಬಂಧನ

ಗಾಜಿಯಾಬಾದ್ : ಹಣಕ್ಕಾಗಿ ಛತ್ತೀಸ್ ಗಡದ ಸಚಿವರೊಬ್ಬರಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಪತ್ರಕರ್ತ ವಿನೋದ್ ವರ್ಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ವಿನೋದ್ ವರ್ಮಾ ಸಚಿವರೊಬ್ಬರು ಭಾಗಿಯಾಗಿದ್ದರೆನ್ನಲಾದ ಲೈಂಗಿಕ ಕ್ರಿಯೆಯ ವಿಡಿಯೋ ಸಿಡಿ ಇಟ್ಟುಕೊಂಡು ಬೆದರಿಕೆ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿನೋದ್ ಅವರ ಇಂದಿರಾಪುರದಲ್ಲಿರುವ ನಿವಾಸದಿಂದ ಅವರನ್ನು ಬಂಧಿಸಲಾಗಿದ್ದು, ಅವರಿಗೆ ಸೇರಿದ ಲ್ಯಾಪ್ ಟಾಪ್ , ಪೆನ್ ಡ್ರೈವ್ ಹಾಗೂ ಸಿಡಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿನೋದ್  ಬಿಬಿಸಿಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದು, ಕೆಲಕಾಲ ‘ಅಮರ್ ಉಜಾಲಾ’ದ ಡಿಜಿಟಲ್  ಆವೃತ್ತಿಯಲ್ಲಿಯೂ ಸಂಪಾದಕರಾಗಿದ್ದರು. ಇದೀಗ ಫ್ರೀಲ್ಯಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

 

 

 

Get Latest updates on WhatsApp. Send ‘Add Me’ to 8550851559