ರಾಜ್ಯದ ಪ್ರತಿ ವ್ಯಕ್ತಿ ಮೇಲೆ 37 ಸಾವಿರ ಸಾಲದ ಹೊರೆ : ಕುಮಾರಸ್ವಾಮಿ – News Mirchi
We are updating the website...

ರಾಜ್ಯದ ಪ್ರತಿ ವ್ಯಕ್ತಿ ಮೇಲೆ 37 ಸಾವಿರ ಸಾಲದ ಹೊರೆ : ಕುಮಾರಸ್ವಾಮಿ

ಬೆಂಗಳೂರು: 2018 ಅಂತ್ಯದ ವೇಳೆಗೆ ರಾಜ್ಯ ಮಾಡಿದ ಒಟ್ಟು ಸಾಲ ರೂ.2.42 ಲಕ್ಷ ಕೋಟಿಗೇರಲಿದೆ ಎಂದು ಹೇಳಿರುವ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸರ್ಕಾರ ಪ್ರತಿ ವ್ಯಕ್ತಿ ಮೇಲೆ ರೂ.37,290 ಸಾಲದ ಹೊರೆ ಉಳಿಸಿದೆ ಎಂದು ಆರೋಪಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಮಾಡಿರುವ ಸಾಲಕ್ಕೆ ಬಡ್ಡಿ ಕಟ್ಟಲೂ ಸಾಲ ಮಾಡಬೇಕಾದ ಸಂದರ್ಭ ಬರಬಹುದು ಎಂದು ಎಚ್ಚರಿಸಿದರು. ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಮುಖ್ಯಮಂತ್ರಿಗಳು ರಾಜ್ಯದ ಒಟ್ಟು ಆಂತರಿಕ ಉತ್ನನ್ನದ ಕುರಿತು ತಪ್ಪು ಲೆಕ್ಕ ನೀಡಿದ್ದಾರೆ ಆರೋಪಿಸಿದ್ದಾರೆ.

ಸಾಲ ಮತ್ತು ಬಡ್ಜೆಟ್ ಗಾತ್ರ ಹೆಚ್ಚುತ್ತಿದ್ದರೂ ಮೀಸಲಿಟ್ಟ ಹಣ ಮಾತ್ರ ಖರ್ಚಾಗದೆ ಉಳಿಯುತ್ತಿದೆ. ಹೀಗಿದ್ದಾಗ ಬಡ್ಜೆಟ್ ಗಾತ್ರವನ್ನು ಹೆಚ್ಚಿಸುವ ಅವಶ್ಯಕತೆಯೇನಿದೆ ಎಂದು ಪ್ರಶ್ನಿಸಿದರು. ಈ ಹಿಂದಿನ ಬಜೆಟ್ ಗಳಲ್ಲಿ ಅನುಮೋದನೆಗೊಂಡಿದ್ದ ರೂ.80 ಸಾವಿರ ಕೋಟಿ ಖರ್ಚಾಗದೆ ಉಳಿದಿದೆ. ಕೃಷಿ ಇಲಾಖೆಗೆ ನಾಲ್ಕು ವರ್ಷಗಳಲ್ಲಿ ನೀಡಿದ್ದ 26,473 ಕೋಟಿ ಅನುದಾನದಲ್ಲಿ ಇನ್ನೂ 7,689 ಕೋಟಿ ವೆಚ್ಚ ಮಾಡದೇ ಉಳಿದಿದೆ. ಈ ಉಳಿದ ಅನುದಾನದ ಹಣವನ್ನು ರೈತರಿಗಾದರೂ ನೀಡಿದ್ದಿದ್ದರೆ ರೈತರ ಅತ್ಮಹತ್ಯೆಗಳನ್ನು ಕಡಿಮೆ ಮಾಡಬಹುದಾಗಿತ್ತು ಎಂದರು. ರೈತರ ಸಾಲ ಮರುಪಾವತಿ ಅವಧಿಯನ್ನು ಡಿಸೆಂಬರ್ ವರೆಗೆ ವಿಸ್ತರಿಸಲು ಇದೇ ವೇಳೆ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!