ಸರಗಳ್ಳತನ ಮಾಡುತ್ತಿದ್ದ ಸಿನಿಮಾ ನಿರ್ಮಾಪಕನ ಬಂಧನ – News Mirchi

ಸರಗಳ್ಳತನ ಮಾಡುತ್ತಿದ್ದ ಸಿನಿಮಾ ನಿರ್ಮಾಪಕನ ಬಂಧನ

ಬೆಂಗಳೂರು :  ಸಿನಿಮಾ ನಿರ್ಮಾಪಕರು ಸಿನಿಮಾ ಮಾಡೋದನ್ನು ನೋಡಿದ್ದೇವೆ. ಆದರೆ ಸರಗಳ್ಳತನ ಮಾಡುವುದನ್ನು ನೋಡಿರಲಿಲ್ಲ. ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ‘ಡಬಲ್ ಮೀನಿಂಗ್’ ಚಿತ್ರ ನಿರ್ಮಾಪಕ ಪ್ರತಾಪ್ ರಂಗು ಅಲಿಯಾಸ್ ರಂಗನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಹಲವು ಪ್ರಕರಣಗಳಲ್ಲಿ ಪೊಲೀಸರ ವಾಂಟೆಡ್ ಕಾಲಂನಲ್ಲಿದ್ದ ಈತ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ. ಕೆಲದಿನಗಳ ಹಿಂದೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ರಂಗು ಕೂದಲೆಳೆ ಅಂತರದಲ್ಲಿ ಪೊಲೀಸರಿಂದ ಪಾರಾಗಿದ್ದ. ಅನಂತಪುರ ಜಿಲ್ಲೆಯ ಮಡಕಸೀರಾದಲ್ಲಿ ತಲೆ ಮರೆಸಿಕೊಂಡಿದ್ದ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ವಿಧಾನಸೌಧ ಸಮೀಪದ ಬಿಲ್ಡಿಂಗ್ ಒಂದರಲ್ಲಿ ಇರುವ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.

ಬಸವೇಶ್ವರ ನಗರ, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

 

 

Get Latest updates on WhatsApp. Send ‘Add Me’ to 8550851559

Loading...