ಸಿದ್ದರಾಮಯ್ಯನವರ ಸರ್ಕಾರದ ಆಯಸ್ಸು ಮುಗಿಯುತ್ತಿದೆ : ಬಿ.ಎಸ್.ಯಡಿಯೂರಪ್ಪ ಟೀಕೆ – News Mirchi

ಸಿದ್ದರಾಮಯ್ಯನವರ ಸರ್ಕಾರದ ಆಯಸ್ಸು ಮುಗಿಯುತ್ತಿದೆ : ಬಿ.ಎಸ್.ಯಡಿಯೂರಪ್ಪ ಟೀಕೆ

ಹುಬ್ಬಳ್ಳಿ :  ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಖಜಾಜೆಯನ್ನು ದರೋಡೆ ಮಾಡುವಲ್ಲಿ ನಿರತರಾಗಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರದ ಆಯಸ್ಸು ಮುಗಿಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ.

ಹುಬ್ಬಳ್ಳಿಯಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರ್ಜ್ ರಾಜೀನಾಮೆ ಪಡೆಯಬೇಕಿತ್ತು, ಚಾರ್ಜ್‌ಶಿಟ್ ಆಗುವವರೆಗೂ ಕಾಯುತ್ತೇವೆ ಎಂದಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನು ಸಿದ್ದರಾಮಯ್ಯನವರು ಉಲ್ಲಂಘನೆ ಮಾಡಿದ್ದಾರೆ. ಜಾರ್ಜ್ ಗೆ ನೈತಿಕತೆ ಎನ್ನವುದೇ ಇದ್ದರೆ ಇಂದೇ ರಾಜೀನಾಮೆ ನೀಡಲಿ. ಬಿಬಿಎಂಪಿ ಮೂಲಕ ಬೆಂಗಳೂರು ನಗರವನ್ನು ಒತ್ತೆ ಇಡುತ್ತಿದ್ದಾರೆ. ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ದೇಶ ಕಂಡರಿಯದ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಿದ್ದಾರೆ. ತುಘಲಕ್ ದರ್ಬಾರ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.

ವಿದ್ಯುತ್ ಖರೀದಿಯಲ್ಲಿನ  ಕಿಕ್‌ಬ್ಯಾಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು  ತಮ್ಮ ಹಗರಣ ಮುಚ್ಚಿ ಹಾಕಲು ಡಿಕೆಶಿ ವಾಮ ಮಾರ್ಗ ಹಿಡಿದಿದ್ದಾರೆ. ಸಿದ್ದರಾಮಯ್ಯನವರಿಗೆ ಪ್ರಕರಣದ ಬಗ್ಗೆ ಕಾಳಜಿ ಇದ್ದರೆ  ಈದಿನವೇ ಸಿಬಿಐ ಗೆ ವಹಿಸಲಿ, ಇಲ್ಲವೇ ನ್ಯಾಯಾಂಗ ತನಿಖೆ ಮಾಡಿಸಲಿ.  ಅವರು ಅಧಿಕಾರದಿಂದ ಕೆಳಗಿಳಿದು ಮನೆಗೆ ಹೋಗುವ ಸಮಯ ಬಂದಿದೆ. ಸುಳ್ಳು ಸುಳ್ಳು ಹಗರಣವನ್ನ ತಂದು ಬಿಜೆಪಿ ನಾಯಕರನ್ನು ಕಟ್ಟಿ ಹಾಕುವ ತಂತ್ರ ಇದು, ಬೇಕಿದ್ದರೆ ಚಳಿಗಾಲದ ಅಧಿವೇಶನದಲ್ಲಿ ನಾವು ಚರ್ಚೆಗೆ ಸಿದ್ದರಿದ್ದೇವೆ ಎಂದು ತಿಳಿಸಿದರು.

 

Get Latest updates on WhatsApp. Send ‘Add Me’ to 8550851559

Loading...