ಜಿಎಸ್‌ಟಿ ಕುರಿತು ಮತ್ತಷ್ಟು ಸ್ಪಷ್ಟತೆ ಬೇಕು

ಜಿಎಸ್ಟಿ ಮಸೂದೆ ವಿಳಂಬದಿಂದ ಸರ್ಕಾರದ ಖಜಾನೆಗೆ ರೂ.12 ಲಕ್ಷ ಕೋಟಿ ನಷ್ಟ ಉಂಟಾಗಿದೆ ಎಂದು ಕಾಂಗ್ರೆಸ್ ಸಂಸದ ವೀರಪ್ಪ ಮೊಯಿಲಿ ಹೇಳಿದ್ದಾರೆ. ಜಿಎಸ್ಟಿ ಮಸೂದೆ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಅವರು ಮಾತನಾಡುತ್ತಿದ್ದರು. ಜಿಎಸ್ಟಿ ಕುರಿತು ಎಲ್ಲಾ ರೀತಿಯ ವ್ಯಾಪಾರಿ ವರ್ಗಗಳಿಗೆ ಅರಿವು ಮೂಡಿಸಬೇಕು. ಇದರ ಬಗ್ಗೆ ಎಲ್ಲಾ ರಾಜ್ಯಗಳಿಗೂ ತೃಪ್ತಿಯಾಗಬೇಕು. ತೆರಿಗೆ ವಿಧಿಸುವುದರ ಬಗ್ಗೆ ಇನ್ನೂ ಸ್ಪಷ್ಟತೆ ನೀಡಬೇಕಿದೆ. ಸದ್ಯದ ಜಿಎಸ್ಟಿ ಮಸೂದೆ ಜಾರಿಗೆ ಕಾರ್ಯರೂಪಕ್ಕೆ ತರಲು ಕಷ್ಟವೆನಿಸುತ್ತದೆ ಎಂದು ವೀರಪ್ಪ ಮೊಯಿಲಿ ಹೇಳಿದ್ದಾರೆ.

ಜಿಎಸ್ಟಿ ಮಸೂದೆ ಕಾಂಗ್ರೆಸ್ ಅವಧಿಯಲ್ಲೇ ಜಾರಿಯಾಗಬೇಕಿತ್ತು. ಆದರೆ ಪ್ರತಿಪಕ್ಷಗಳ ಅಸಹಕಾರದಿಂದ ಅದು ಸಾಧ್ಯವಾಗಲಿಲ್ಲ ಎಂದು ಆರೋಪಿಸಿದರು.

Loading...

Leave a Reply

Your email address will not be published.

error: Content is protected !!