ರಸ್ತೆ ಮಾರ್ಗವಾಗಿ ಶಿವಸೇನೆ ಸಂಸದ ದೆಹಲಿಗೆ – News Mirchi

ರಸ್ತೆ ಮಾರ್ಗವಾಗಿ ಶಿವಸೇನೆ ಸಂಸದ ದೆಹಲಿಗೆ

ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಅವರ ವಿಮಾನ ಟಿಕೆಟ್ ಮತ್ತೊಮ್ಮೆ ರದ್ದಾಗಿದ್ದರಿಂದ ಕಾರಿನಲ್ಲಿ ರಸ್ತೆ ಮಾರ್ಗವಾಗಿ ದೆಹಲಿ ತಲುಪಿದ್ದಾರೆ. ಬುಧವಾರ ಅವರು ಲೋಕಸಭೆ ಅಧಿವೇಶನದಲ್ಲಿ ಹಾಜರಾಗಲು ಮಂಗಳವಾರ ಮುಂಬೈನಿಂದ ದೆಹಲಿಗೆ ಏರ್ ಇಂಡಿಯಾ ಟಿಕೆಟ್ ಬುಕ್ ಮಾಡಿದ್ದರು. ಆದರೆ ಈಗಾಗಲೆ ಗಾಯಕ್ವಾಡ್ ಅವರನ್ನು ನಿಷೇಧಿತ ವ್ಯಕ್ತಿಗಳ ಪಟ್ಟಿಯಲ್ಲಿ ವಿಮಾನಯಾನ ಸಂಸ್ಥೆಗಳು ಸೇರಿಸಿದ್ದರಿಂದ ಟಿಕೆಟ್ ರದ್ದುಗೊಂಡಿತ್ತು. ಹೀಗಾಗಿ ಬೇರೆ ದಾರಿಯಿಲ್ಲದೆ ಕಾರಿನಲ್ಲಿ ದೆಹಲಿಗೆ ಹೊರಟರೆಂದು ಗಾಯಕ್ವಾಡ್ ಆಪ್ತ ಮೂಲಗಳು ಹೇಳಿವೆ.

ಬ್ಯುಸಿನೆಸ್ ಕ್ಲಾಸ್ ಸೀಟ್ ನೀಡಲಿಲ್ಲವೆಂಬ ಕೋಪದಿಂದ ಗಾಯಕ್ವಾಡ್ ಏರ್ ಇಂಡಿಯಾ ಸೀನಿಯರ್ ಮ್ಯಾನೇಜರ್ ಅನ್ನು ಚಪ್ಪಲಿಯಿಂದ ಹಲವು ಬಾರಿ ಹೊಡೆದಿದ್ದರು. ಈ ಘಟನೆಯ ನಂತರ ಏರ್ ಇಂಡಿಯಾ ಸೇರಿದಂತೆ ಪ್ರಮುಖ ವಿಮಾನಯಾನ ಸಂಸ್ಥೆಗಳು ಗಾಯಕ್ವಾಡ್ ನನ್ನು ನಿಷೇಧಿತ ಪಟ್ಟಿಗೆ ಸೇರಿಸಿದ್ದವು.

Loading...

Leave a Reply

Your email address will not be published.