ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ ಸಾರಿಗೆ ಸಚಿವ ರೇವಣ್ಣ – News Mirchi

ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ ಸಾರಿಗೆ ಸಚಿವ ರೇವಣ್ಣ

ಬೆಂಗಳೂರು :  ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಫುಲ್ ಆ್ಯಕ್ಟಿವ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರೊಂದಿಗೆ ಸಂವಹನ ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಬಳಕೆಗೆ  ರೇವಣ್ಣ ಮುಂದಾಗಿದ್ದಾರೆ. ಮೈಸೂರಿನಲ್ಲಿ ಪಾಸ್ ಹೊಂದಿರದ ವಿದ್ಯಾರ್ಥಿ ಬಸ್ ಏರಲು ಮುಂದಾಗಿದ್ದ  ವೇಳೆ ಬಸ್‌ ನಿಲ್ಲಿಸದೇ ಚಲಿಸಿದ್ದ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿ ಕಾಲು ಮುರಿದುಕೊಂಡಿದ್ದ. ಈ ಘಟನೆಗೆ ಬಸ್‌ ಕಂಡಕ್ಟರ್ ಮತ್ತು ಚಾಲಕನ ನಿರ್ಲಕ್ಷ್ಯ ಕಾರಣವೆಂದು ದೂರು ದಾಖಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಸಾರಿಗೆ ಸಚಿವರು ಸಾಮಾಜಿಕ ಜಾಲತಾಣದ ಮೂಲಕ ಇಲಾಖೆ ಸಿಬ್ಬಂದಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸಾರಿಗೆ ನಿಗಮಗಳ ಬಸ್ ಚಾಲಕರು ಮತ್ತು ನಿರ್ವಾಹಕರು ಇನ್ನು ಮುಂದೆ ಪಾಸ್ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಅನುಚಿತವಾಗಿ‌ ವರ್ತಿಸಿದ ಬಗ್ಗೆ ದೂರುಗಳು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಎಚ್ಚರಿಕೆಯ ಸಂದೇಶ ಪೋಸ್ಟ್ ಮಾಡಿದ್ದಾರೆ.

ಬಸ್ ನಿರ್ವಾಹಕರಿಗೆ ಪ್ರಸಿದ್ಧ ನಟ ರಜನಿಕಾಂತ್ ಸ್ಫೂರ್ತಿಯಾಗಬೇಕು. ನಾನು ಕೂಡ ವಿದ್ಯಾರ್ಥಿ ಜೀವನದಲ್ಲಿ ಬಸ್ ಹತ್ತಿದ್ದೇನೆ, ಉತ್ತಮ ನಿರ್ವಾಹಕರನ್ನೂ ನೋಡಿದ್ದೇನೆ. ಅದರಲ್ಲಿಯೂ 10 ಎ ಸಂಖ್ಯೆಯ ಬಸ್‌ನಲ್ಲಿ ಹನುಮಂತನಗರದ ಪ್ರಯಾಣ ಮಾತ್ರ ಮರೆಯುವಂತಿಲ್ಲ. ಏಕೆಂದರೆ ಆ ಬಸ್‌ನಲ್ಲಿ ಇಂದು ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್ ನಿರ್ವಾಹಕ ಆಗಿದ್ದರು. ಅವರು ಪ್ರಯಾಣಿಕರೊಂದಿಗೆ ವರ್ತಿಸುತ್ತಿದ್ದ ರೀತಿ ನಿಜಕ್ಕೂ ಸ್ನೇಹಪರ ಮತ್ತು ಸೌಜನ್ಯದಿಂದ ಕೂಡಿರುತ್ತಿತ್ತು. ಅವರು ಇದ್ದ ಬಸ್ ಹತ್ತುವುದೇ ಪ್ರಯಾಣಿಕರಿಗೆ ಮಹಾದಾನಂದವಾಗಿರುತ್ತಿತ್ತು. ಅಂತಹವರ ಕರ್ತವ್ಯ ಎಲ್ಲರಿಗೂ ಸ್ಫೂರ್ತಿ ಎಂದು ಅವರು ನಿರ್ವಾಹಕರಿಗೆ ಫೇಸ್‌ಬುಕ್ ಮೂಲಕ ಕಿವಿಮಾತು ಹೇಳಿದ್ದಾರೆ.

 

 

 

 

 

Get Latest updates on WhatsApp. Send ‘Add Me’ to 8550851559

Loading...