ಬೀದರ್ -ಕಲಬುರ್ಗಿ ರೈಲು ಮಾರ್ಗ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ – News Mirchi

ಬೀದರ್ -ಕಲಬುರ್ಗಿ ರೈಲು ಮಾರ್ಗ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಬೀದರ್ :  ಉತ್ತರ ಕರ್ನಾಟಕದ ಬಹುದಿನದ ಕನಸಿಗೆ ಪ್ರಧಾನಿ ಮೋದಿ ನೀರೆರೆದರು. ಬೀದರ್ ಕಲಬುರ್ಗಿ ರೈಲು ಮಾರ್ಗ ಯೋಜನೆಗೆ ಚಾಲನೆ ನೀಡಿದರು.

ಬಳಿಕ ನೆಹರೂ ಮೈದಾನದಲ್ಲಿ ಆಯೋಜಿಸಲಾದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಿಮ್ಮ ಬಹುದಿನದ ಕನಸು ನನಸಾಗಿದೆ. ಈಗ ನಿಮಗೆ ಮುಂಬೈ ಸಹ ಹತ್ತಿರವಾಗಿದೆ. ಯೋಜನೆ ಅನುಷ್ಠಾನಕ್ಕೆ ಇಪ್ಪತ್ತು ವರ್ಷ ಬೇಕಾಯಿತು. 369 ಕೋ.ರೂಗಳ ಯೋಜನೆಯೀಗ 1542ಕೋ.ರೂ.ಗೆ ಏರಿಕೆಯಾಗಿದೆ. ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಅದಕ್ಕೀಗ ಬಿಡುಗಡೆ ದೊರಕಿದೆ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ದೆಹಲಿಯಲ್ಲಿ ಆಡಳಿತದಲ್ಲಿದ್ದ ಕೇಂದ್ರದ ಯುಪಿಎ ಸರ್ಕಾರ ಸರಿಯಾಗಿ ಸ್ಪಂದಿಸಿರಲಿಲ್ಲ. ಪಟ್ಟು ಹಿಡಿದ ಯಡಿಯೂರಪ್ಪ ಯೋಜನೆಯನ್ನು ಜಾರಿಗೆ ತಂದರು. ದೇಶದ ಅಭಿವೃದ್ಧಿಗೆ ಕಠಿಣ ಶ್ರಮ ಅಗತ್ಯ. ಈ ನಿಟ್ಟಿನಲ್ಲಿ ನಾವು ದೃಢ ಹೆಜೆಜ ಇಟ್ಟಿದ್ದೇವೆ ಎಂದು ತಿಳಿಸಿದರು.  ಒಂದು ವರ್ಷದೊಳಗೆ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗುವುದು. 18ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ  ಇರಲಿಲ್ಲ.  ರೈತರಿಗೆ ನೀರೇ ಸಿಗುತ್ತಿರಲಿಲ್ಲ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹೆಸರಿಗಿತ್ತು. ಆದರೆ ಯಾರೂ ಪಡೆಯುತ್ತಿರಲಿಲ್ಲ.  ಬೀದರ್ ಜಿಲ್ಲೆಯಲ್ಲೆ 150ಕೋಟಿ ವಿಮೆ ದೊರಕಿದೆ ಎಂದು ತಿಳಿಸಿದರು.  ಸರ್ಕಾರ ಬಡವರಿಗಾಗಿಯೇ ಇರಬೇಕು.  ಕಟ್ಟಕಡೆಯ ವ್ಯಕ್ತಿಗೂ ಯೋಜನೆ ತಲುಪಬೇಕು ಎಂದು ತಿಳಿಸಿದರು.

 

 

Get Latest updates on WhatsApp. Send ‘Add Me’ to 8550851559

Loading...