ಹಾಲಿನ ಪ್ರೋತ್ಸಾಹ ಧನ ರೂ. 5 ಕ್ಕೆ ಏರಿಕೆ

ಡಿಸೆಂಬರ್ 2016 ರಿಂದ ಪುರ್ವಾನ್ವಯವಾಗುವಂತೆ ಪ್ರತಿ ಲೀಟರ್ ಹಾಲಿಗೆ ಈಗ ನೀಡುತ್ತಿರುವ ಪ್ರೊತ್ಸಾಹ ಧನವನ್ನು ರೂ.4 ರಿಂದ ರೂ.5 ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯದ 18.15 ಲಕ್ಷ ಹಾಲು ಉತ್ಪಾದಕರು ಇದರ ಉಪಯೋಗ ಪಡೆಯಲಿದ್ದಾರೆ.

ಪ್ರೋತ್ಸಾಹ ಧನವನ್ನು ಇನ್ನು ಮುಂದೆ ಹಾಲು ಉತ್ಪಾದಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಆದರೆ ಇದಕ್ಕಾಗಿ ಹಾಲು ಉತ್ಪಾದಕರ ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಆಗಿರಬೇಕು. ಆಧಾರ್ ಕಾರ್ಡ್ ಲಿಂಕ್ ಆಗದ ಹಾಲು ಉತ್ಪಾದಕರಿಗೆ ಆಧಾರ್ ಜೊಡಣೆ ಪ್ರಕ್ರಿಯೆ ಮುಗಿದ ನಂತರವೇ ಪ್ರೋತ್ಸಾಹ ಧನ ದೊರೆಯುತ್ತದೆ.

Loading...

Leave a Reply

Your email address will not be published.

error: Content is protected !!