ಆರೋಗ್ಯ ಸಚಿವಾಲಯದ ಅಧಿಕಾರಿಗಳಿಗೆ ಲಂಚದ ಆಮಿಷ, ಮೂವರನ್ನು ಬಂಧಿಸಿದ ಸಿಬಿಐ – News Mirchi

ಆರೋಗ್ಯ ಸಚಿವಾಲಯದ ಅಧಿಕಾರಿಗಳಿಗೆ ಲಂಚದ ಆಮಿಷ, ಮೂವರನ್ನು ಬಂಧಿಸಿದ ಸಿಬಿಐ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಗಳಿಗೆ ಲಂಚ ನೀಡಿ ಪ್ರಭಾವ ಬೀರಲು ಯತ್ನಿಸಿದ ಆರೋಪದ ಮೇಲೆ ಸಿಬಿಐ ಮೂವರನ್ನು ಬಂಧಿಸಿದೆ. ಬಂಧಿತರು ಡಿಬಾರ್ ಆಗಿದ್ದ ಹರಿಯಾಣದ ಝಜ್ಜಾರ್ ಜಿಲ್ಲೆಯ ವೈದ್ಯಕೀಯ ಕಾಲೇಜಿಗೆ ಮನ್ನಣೆ ಪಡೆಯಲು ಲಂಚದ ನೀಡಲು ಮುಂದಾಗಿದ್ದರು ಎನ್ನಲಾಗಿದೆ.

ಹಿರಿಯ ಅಧಿಕಾರಿಗಳಿಗೆ ಲಂಚ ನೀಡಲು ಪ್ರಮುಖ ಸುದ್ದಿ ವಾಹಿನಿಯ ನೋಯ್ಡಾ ಮೂಲದ ಪತ್ರಕರ್ತರೊಬ್ಬರ ಕೈವಾಡದ ಬಗ್ಗೆಯೂ ಸಿಬಿಐ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ. ಪ್ರಕರಣದಲ್ಲಿ ಆತನ ಹೆಸರು ಬೆಳಕಿಗೆ ಬರುತ್ತಿದ್ದಂತೆ ಸುದ್ದಿ ವಾಹಿನಿಯ ತನ್ನ ಹುದ್ದೆಗೆ ಪತ್ರಕರ್ತ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಲಂಚ ಪ್ರಕರಣದ ಕುರಿತು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಪಡೆದಿದ್ದ ಸಿಬಿಐ ಆಗಸ್ಟ್ 3 ರಂದು ದೂರು ದಾಖಲಿಸಿಕೊಂಡಿತ್ತು.

ವಿವಾದಿತ ಸ್ಥಳದಲ್ಲಿಯೇ ರಾಮಮಂದಿರವಾಗಲಿ: ಶಿಯಾ ವಕ್ಫ್ ಬೋರ್ಡ್

ವರ್ಲ್ಡ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಅಂಡ್ ಹಾಸ್ಪಿಟಲ್ ನ ನಿಶಾಂತ್ ಸಿಂಗ್, ವೈಭವ್ ಶರ್ಮ, ವಿ.ಕೆ.ಶರ್ಮ ಎಂಬುವವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿದೆ.

Loading...