8 ಅಮರನಾಥ ಯಾತ್ರಿಗಳ ಸಾವಿಗೆ ಕಾರಣರಾದ 3 ಉಗ್ರರ ಹತ್ಯೆ – News Mirchi
ಸಾಂದರ್ಭಿಕ ಚಿತ್ರ

8 ಅಮರನಾಥ ಯಾತ್ರಿಗಳ ಸಾವಿಗೆ ಕಾರಣರಾದ 3 ಉಗ್ರರ ಹತ್ಯೆ

ಜುಲೈನಲ್ಲಿ ಅಮರಾಥ ಯಾತ್ರಿಗಳ ಮೇಲೆ ನಡೆದ ದಾಳಿಗೆ ಕಾರಣವೆನ್ನಲಾದ ಪಾಕ್ ನ ಇಬ್ಬರು ಸೇರಿದಂತೆ ಮೂವರು ಲಷ್ಕರ್-ಇ-ತಯ್ಬಾ ಉಗ್ರರನ್ನು ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಎನ್ಕೌಂಟರಿನಲ್ಲಿ ಕೊಂದಿದ್ದಾರೆ.

ಎನ್ಕೌಂಟರ್ ಪ್ರದೇಶದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಮತ್ತೊಬ್ಬ ಉಗ್ರನನ್ನೂ ಅನಂತನಾಗ್ ಜಿಲ್ಲೆಯ ಹೆರಿಗೆ ಆಸ್ಪತ್ರೆಯೊಂದರಿಂದ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಮಧ್ಯಾಹ್ನ ಸೇನಾ ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ನಂತರ ಎನ್ಕೌಂಟರ್ ಆರಂಭವಾಗಿತ್ತು. ಘಟನೆಯಲ್ಲಿ ಒಬ್ಬ ಯೋಧ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.

ಇಂದು ಅಯೋಧ್ಯೆ ವಿವಾದ ಪ್ರಕರಣದ ಅಂತಿಮ ವಿಚಾರಣೆ

ಪ್ರದೇಶವನ್ನು ಸುತ್ತುವರೆದ ಭದ್ರತಾ ಪಡೆಗಳು ಉಗ್ರರಿಗಾಗಿ ಶೋಧ ಕಾರ್ಯಚರಣೆ ನಡೆಸಿದ್ದರು. ಈ ವೇಳೆ ಎನ್ಕೌಂಟರ್ ನಡೆದಿದ್ದು, ಬೆಳಗಿನ ಜಾವ 2 ಗಂಟೆಗೆ ಕಾರ್ಯಚರಣೆ ಮುಗಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸತ್ತ ಉಗ್ರರನ್ನು ಸ್ಥಳೀಯ ಉಗ್ರ ಯಾವರ್ ಬಸೀರ್, ಮತ್ತು ಪಾಕ್ ನ ಅಬು ಫರ್ಖಾನ್ ಮತ್ತು ಅಬು ಮವಿಯಾ ಎಂದು ಗುರುತಿಸಲಾಗಿದೆ. ಬಸೀರ್ ಕುಲ್ಗಾಮ್ ಜಿಲ್ಲೆಯವನಾಗಿದ್ದು, ಇದೇ ಫೆಬ್ರವರಿಯಲ್ಲಿ ಪೊಲೀಸರಿಂದ ಬಂದೂಕು ಕಸಿದುಕೊಂಡು ಲಷ್ಕರ್ ಸಂಘಟನೆ ಸೇರಿದ್ದ. ಅಬು ಇಸ್ಮಾಯಿಲ್ ನಂತರ ಫರ್ಖಾನ್ ದಕ್ಷಿಣ ಕಾಶ್ಮೀರದಲ್ಲಿ ಲಷ್ಕರ್ ಉಗ್ರ ಸಂಘಟನೆಯನ್ನು ಮುನ್ನಡೆಸುತ್ತಿದ್ದ.

12 ವರ್ಷ ಒಳಗಿನ ಬಾಲಕಿಯರ ಅತ್ಯಾಚಾರಿಗಳಿಗೆ ಮರಣದಂಡನೆ

ಸತ್ತ ಮೂವರೂ ಉಗ್ರೂ ಜುಲೈ 10 ರಂದು ಅಮರನಾಥ ಯಾತ್ರಿಗಳ ಮೇಲೆ ದಾಳಿ ನಡೆಸಿ 8 ಯಾತ್ರಿಗಳ ಸಾವಿಗೆ ಕಾರಣವಾಗಿದ್ದರು. ಈ ಘಟನೆಯಲ್ಲಿ 19 ಯಾತ್ರಿಗಳು ಗಾಯಗೊಂಡಿದ್ದರು.

Get Latest updates on WhatsApp. Send ‘Subscribe’ to 8550851559

Loading...