ಮೂವರು ನೂತನ ಸಚಿವರು, ಗೃಹ ಖಾತೆ ರಾಮಲಿಂಗಾರೆಡ್ಡಿ ಹೆಗಲಿಗೆ |News Mirchi

ಮೂವರು ನೂತನ ಸಚಿವರು, ಗೃಹ ಖಾತೆ ರಾಮಲಿಂಗಾರೆಡ್ಡಿ ಹೆಗಲಿಗೆ

ರಾಜಭವನದಲ್ಲಿ ಇಂದು ಸಂಜೆ ಗುಂಡ್ಲುಪೇಟೆ ಶಾಸಕಿ ಗೀತಾ ಮಹದೇವ ಪ್ರಸಾದ್, ಎಚ್.ಎಂ.ರೇವಣ್ಣ ಮತ್ತು ಆರ್.ಬಿ.ತಿಮ್ಮಾಪುರ ಅವರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ವಿ.ಆರ್.ವಾಲಾ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಗೀತಾ ಮಹದೇವ ಪ್ರಸಾದ್ ಅವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಎಚ್.ಎಂ.ರೇವಣ್ಣ ಮತ್ತು ಆರ್.ಬಿ.ತಿಮ್ಮಾಪುರ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಎಚ್.ವೈ.ಮೇಟಿ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರ ರಾಜೀನಾಮೆಯಿಂದ ಎರಡು ಸಚಿವ ಸ್ಥಾನಗಳು ಮತ್ತು ಮಹದೇವಪ್ಪ ಅವರ ನಿಧನದಿಂದ ಒಂದು ಸಚಿವ ಸ್ಥಾನ ಖಾಲಿ ಇದ್ದವು. ಈ ಮೂರು ಸ್ಥಾನಗಳನ್ನು ನೂತನ ಸಚಿವರಿಂದ ಭರ್ತಿ ಮಾಡಲಾಗಿದೆ.

ಇನ್ನು ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ವಹಿಸಿಕೊಂಡಿದ್ದ ಗೃಹ ಖಾತೆಯನ್ನು ಸಚಿವ ರಾಮಲಿಂಗಾರೆಡ್ಡಿಯವರಿಗೆ ವಹಿಸಲಾಗಿದೆ. ಇದಕ್ಕೂ ಮುನ್ನ ಸಚಿವ ರಮಾನಾಥ ರೈ ಅವರು ಗೃಹ ಖಾತೆ ಪಡೆಯಲಿದ್ದಾರೆಂದು ಹೇಳಲಾಗುತ್ತಿದ್ದು, ಕೊನೆ ಕ್ಷಣದಲ್ಲಿ ಗೃಹ ಖಾತೆ ರಾಮಲಿಂಗಾರೆಡ್ಡಿಯವರ ಪಾಲಾಗಿದೆ.

ನೂತನ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಗೊಂಡ ಎಚ್.ಎಂ.ರೇವಣ್ಣ ಅವರಿಗೆ ಸಾರಿಗೆ ಖಾತೆ ನೀಡಲಾಗಿದ್ದು, ಆರ್.ಬಿ.ತಿಮ್ಮಾಪುರ ಅವರಿಗೆ ಅಬಕಾರಿ ಮತ್ತು ಗೀತಾ ಮಹದೇವ ಪ್ರಸಾದ್ ಅವರಿಗೆ ಸಕ್ಕರೆ, ಸಣ್ಣ ಕೈಗಾರಿಗೆ ರಾಜ್ಯ ಖಾತೆಯನ್ನು ಹಂಚಿಕೆ ಮಾಡಲಾಗಿದೆ. ಸಣ್ಣ ಕೈಗಾಗಿಕಾ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಸಹಕಾರ ಖಾತೆಯನ್ನು ವಹಿಸಲಾಗಿದೆ. ಸಂತೋಷ್ ಲಾಡ್ ಅವರಿಗೆ ಕಾರ್ಮಿಕ ಖಾತೆ ನೀಡಲಾಗಿದ್ದು, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ರುದ್ರಪ್ಪ ಲಮಾಣಿ ಯವರು ರಾಜ್ಯ ಸಚಿವ ಸ್ಥಾನದಿಂದ ಸಂಪುಟ ದರ್ಜೆಗೆ ಬಡ್ತಿ ಪಡೆದಿದ್ದಾರೆ.

Loading...
loading...
error: Content is protected !!