ಭಾರತೀಯ ಯೋಧನನ್ನು ತುಂಡು ಮಾಡಿ ಎಸೆದ ಪಾಕ್

ಜಮ್ಮೂ ಕಾಶ್ಮೀರ: ಪಾಕ್ ಸೈನಿಕರು ತಮ್ಮ ಕ್ರೂರ ಮುಖವನ್ನು ಮತ್ತೊಮ್ಮೆ ತೋರಿಸಿದ್ದಾರೆ. ಭಾರತೀಯ ಯೋಧನನ್ನು ಕೊಂದು ದೇಹವನ್ನು ತುಂಡು ತುಂಡು ಮಾಡಿದ್ದಾರೆ. ಮಂಗಳವಾರ(ಇಂದು) ಮುಂಜಾನೆಯಿಂದ ಪರಸ್ಪರ ದಾಳಿಯಲ್ಲಿ ಈ ಘಟನೆ ನಡೆದಿದೆ. ನಿಯಂತ್ರಣ ರೇಖೆ ಬಳಿ ಕೆಲ ಗಂಟೆಗಳಿಂದ ಭಾರತೀಯ ಯೋಧರು ಮತ್ತು ಪಾಕ್ ಸೈನಿಕರ ನಡುವೆ ಭೀಕರ ಹೋರಾಟ ನಡೆಯುತ್ತಿದೆ.

ಆದರೆ ಗುಂಡಿನ ದಾಳಿಯಲ್ಲಿ ಮೂವರು ಭಾರತೀಯ ಯೋಧರು ಹುತಾತ್ಮರಾದರು. ಇವರಲ್ಲಿ ಒಬ್ಬರ ದೇಹವನ್ನು ಪಾಕ್ ಸೈನಿಕರು ಅಮಾನುಷವಾಗಿ ತುಂಡು ಮಾಡಿ ಎಸೆದಿದ್ದಾರೆ. ಮಚ್ಚಲ್ ಸೆಕ್ಟಾರ್‌ನಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಹಿಂದಿನ ದಿನ ಭಾರತೀಯ ಯೋಧರು ಇಬ್ಬರು ಉಗ್ರರನ್ನು ಕೊಂದಿದ್ದರು. ಪಾಕ್ ಸೈನಿಕರು ಮತ್ತು ಉಗ್ರರು ಸೇರಿ ಈ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಪಾಕ್ ಹೇಡಿ ಕೃತ್ಯಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಭಾರತೀಯ ಸೇನೆ ಹೇಳಿದೆ.

ಭಾರತೀಯ ಸೇನೆ ಪಾಕ್ ಆಕ್ರಮಿತ ಭೂಭಾಗದೊಳಗೆ ಹೋಗಿ ಸರ್ಜಿಕಲ್ ದಾಳಿ ನಡೆಸಿದ ನಂತರ ಪಾಕ್ ಕಡೆಯಿಂದ ಬಲವಾದ ಹೊಡೆತ ಬಿದ್ದಿರುವುದು ಇದೇ ಮೊದಲು. ಯೋಧರನ್ನು ಭೇಟಿ ಮಾಡಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆದೇಶ ನೀಡಿದ ಮಾರನೆಯ ದಿನವೇ ಈ ಘಟನೆ ಸಂಭವಿಸಿದೆ.