ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮೂವರು “ರಾ” ಏಜೆಂಟರ ಬಂಧನ?

View Later

ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂಬ ಆರೋಪಗಳ ಮೇಲೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮೂವರು ಶಂಕಿತ “ರಾ”(ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ಏಜೆಂಟರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಬಂದಿತ ಮೂವರನ್ನೂ ರಾವಲ್ ಕೋಟ್ ನಲ್ಲಿ ಮಾಧ್ಯಮಗಳ ಮುಂದರೆ ಹಾಜರುಪಡಿಸಿದ್ದಾಗಿ ಪಾಕ್ ಪತ್ರಿಕೆ ಡಾನ್ ಹೇಳಿದೆ. ಅವರು ಪಿಒಕೆ(ಕಾಶ್ಮೀರ ಆಕ್ರಮಿತ ಪಾಕ್) ನ ಅಬ್ಬಾಸ್ ಪುರ ತಾರೋಟಿ ಗ್ರಾಮಕ್ಕೆ ಸೇರಿದವರೆಂದು ಪತ್ರಿಕೆ ಹೇಳಿದೆ.

ಶಂಕಿತರಲ್ಲಿ ಪ್ರಮುಖನಾದ ಖಲೀಲ್ 2014 ನವೆಂಬರ್ ನಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಿ “ರಾ” ಅಧಿಕಾರಿಗಳೊಂದಿಗೆ ಪರಿಚಯ ಬೆಳೆಸಿಕೊಂಡಿರುವುದಾಗಿ ಡಿಎಸ್ಪಿ ಸಾಜಿದ್ ಹೇಳಿದ್ದಾರೆ. ಅಬ್ಬಾಸ್ ಪುರ ಪೊಲೀಸ್ ಠಾಣೆ ಹೊರಗೆ ನಡೆದ ಬಾಂಬ್ ಸ್ಪೋಟದಲ್ಲಿ ಬಂಧಿತರ ಕೈವಾಡವಿದೆ ಎಂದು ಅವರು ಆರೋಪಿಸಿದ್ದು, ಉಗ್ರಹ ನಿಗ್ರಹ ಕಾಯ್ದೆಯಡಿ ಮೂವರ ಮೇಲೂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.