ಸೇನೆಯ ಭರ್ಜರಿ ಬೇಟೆ, ಮೂವರು ಲಷ್ಕರ್ ಉಗ್ರರ ಹತ್ಯೆ – News Mirchi

ಸೇನೆಯ ಭರ್ಜರಿ ಬೇಟೆ, ಮೂವರು ಲಷ್ಕರ್ ಉಗ್ರರ ಹತ್ಯೆ

ಜಮ್ಮೂ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಇಂದು ಮುಂಜಾನೆ 4:30ರಲ್ಲಿ ನಡೆದ ಎನ್ಕೌಂಟರಿನಲ್ಲಿ ಮೂವರು ಲಷ್ಕರ್-ಇ-ತೊಯ್ಬಾ ಉಗ್ರರು ಹತರಾಗಿದ್ದಾರೆ. ಉಗ್ರರು ಹಾರಿಸಿದ ಗುಂಡಿಗೆ ಒಬ್ಬ ಪೊಲೀಸ್ ಪೇದೆ ಗಾಯಗೊಂಡಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ನ ಅಮರ್ಗಢ ವಲಯದಲ್ಲಿ ಉಗ್ರರರಿದ್ದ ಮಾಹಿತಿ ಪಡೆದ ಸೇನೆ ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿದರು. ಈ ವೇಳೆ ಭದ್ರತಾ ಪಡೆಗಳ ಮೆಲೆ ಭಯೋತ್ಪಾದಕರು ದಾಳಿ ನಡೆಸಲು ಮುಂದಾಗಿದ್ದರಿಂದ, ಪ್ರತಿಯಾಗಿ ಸೇನೆಯು ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಮೂವರು ಲಷ್ಕರ್ ಉಗ್ರರು ಹತರಾಗಿದ್ದಾರೆ. ಹತರಾದ ಉಗ್ರರಿಂದ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು, ಸ್ಪೋಟಕ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಮೂರು ಎಕೆ-47 ರೈಫಲ್ ಗಳೂ ಸೇರಿವೆ.

20 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಮೊದಲ ಹಿಂದೂ ಸಚಿವ

ಲಷ್ಕರ್-ಇ-ತೊಯ್ಬಾ ದ ಉಗ್ರರ ಹೆಸರುಗಳನ್ನು ಗುರುತಿಸಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎನ್ಕೌಂಟರಿನಲ್ಲಿ ಗಾಯಗೊಂಡ ಪೇದೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಮತ್ತೊಂದು ಕಡೆ, ಸೊಪೋರಾ ವಯಲದಲ್ಲಿನ ಎಲ್ಲಾ ಸರ್ಕಾರ, ಖಾಸಗಿ ಶಾಲೆಗಳಿಗೆ ಶನಿವಾರ ರಜೆ ಘೋಷಿಸಿರುವುದಾಗಿ ಹೆಚ್ಚುವರಿ ಡಿಸಿಪಿ ಹೇಳಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬಾರಾಮುಲ್ಲಾ ಜಿಲ್ಲೆಯಲ್ಲಿ ಇಂಟರ್ನೆಟ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರನನ್ನು ಸೇನೆ ಹತ್ಯೆ ಮಾಡಿತ್ತು.

Loading...