ಮೂಸಾ ನೇತೃತ್ವದ ಸಂಘಟನೆಯ ಮೂವರು ಉಗ್ರರ ಹತ್ಯೆ – News Mirchi

ಮೂಸಾ ನೇತೃತ್ವದ ಸಂಘಟನೆಯ ಮೂವರು ಉಗ್ರರ ಹತ್ಯೆ

ಬುಧವಾರ ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದು, ಅಲ್ ಖೈದಾ ಸಂಘಟನೆಯ ಉಗ್ರ ಜಾಕೀರ್ ಮೂಸಾಗೆ ದೊಡ್ಡ ಪೆಟ್ಟು ನೀಡಿದಂತಾಗಿದೆ. ಭದ್ರತಾ ಪಡೆಗಳಿಂದ ಹತರಾದ ಉಗ್ರರನ್ನು ಇಶಾಖ್ ಅಹಮದ್, ಜಾಹಿದ್ ಅಹಮದ್ ಮತ್ತು ಅಲ್ತಾಫ್ ಅಹಮದ್ ಎಂದು ಗುರುತಿಸಲಾಗಿದೆ. ಸತ್ತ ಮೂವರು ಉಗ್ರರಲ್ಲಿ ಇಬ್ಬರನ್ನು ಮೇಲಿನ ಜಾಕೀರ್ ಮೂಸಾ ನೇತೃತ್ವದ ಅಲ್ ಖೈದಾ ಸಂಘಟನೆ ಹರಿಯಬಿಟ್ಟಿದ್ದ ಚಿತ್ರದಲ್ಲಿ ಕಾಣಬಹುದು.

ಸತ್ತ ಉಗ್ರರು ಈ ಹಿಂದೆ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗೆ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಜಾಕೀರ್ ಮೂಸಾ ನೇತೃತ್ವದ ಸಂಘಟನೆಗೆ ಸೇರಿದ್ದರೆನ್ನಲಾಗಿದೆ. ಕೆಲವೇ ಸದಸ್ಯರನ್ನು ಹೊಂದಿರುವ ಆ ಸಂಘಟನೆಯಲ್ಲಿ ಈಗಾಗಲೇ ಐದು ಉಗ್ರರನ್ನು ಕೊಲ್ಲಲಾಗಿದೆ.

ಮಧ್ಯಾಹ್ನ 1:15 ರ ಸುಮಾರಿಗೆ ತ್ರಾಲ್ ನ ಗುಲಾಬ್ ಭಾಗ್ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಸಿ.ಆರ್.ಪಿ.ಎಫ್ ನ 180 ನೇ ಬೆಟಾಲಿಯನ್, ಸೇನೆಯ 42ನೇ ರಾಷ್ಟ್ರೀಯ ರೈಫಲ್ಸ್, ಪೊಲೀಸ್ ವಿಶೇಷ ಕಾರ್ಯಚರಣೆ ತಂಡಗಳು ಜಂಟಿಯಾಗಿ ಕಾರ್ಯಚರಣೆ ನಡೆಸಿ ಉಗ್ರರನ್ನು ಕೊಂದಿವೆ. ಭದ್ರತಾ ಪಡೆಗಳ ಹಿಟ್ ಲಿಸ್ಟ್ ನಲ್ಲಿರುವ 12 ಉಗ್ರರ ಪೈಕಿ ಈಗಾಗಲೇ 6 ಜನರನ್ನು ಭದ್ರತಾ ಪಡೆಗಳು ಕೊಂದಂತಾಗಿದೆ.

Loading...