ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಕನ್ನಡಿಗ ಕಿಶೋರ್ ಚಂದ್ರ – News Mirchi

ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಕನ್ನಡಿಗ ಕಿಶೋರ್ ಚಂದ್ರ

 ಬೆಂಗಳೂರು :  ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಸಿಐಡಿಯ ಡಿಜಿಪಿಯಾಗಿರುವ ಕನ್ನಡಿಗ ಕಿಶೋರ್ ಚಂದ್ರ ನೇಮಕವಾಗಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಡಿಜಿಪಿ ಆರ್.ಕೆ.ದತ್ತಾ ನಾಳೆ ಸೇವೆಯಿಂದ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಮೈಸೂರು ಮೂಲದವರಾದ ಕಿಶೋರ್ ಚಂದ್ರ ಅವರನ್ನು ನೂತನ ಡಿಜಿಪಿಯನ್ನಾಗಿ  ನೇಮಕಗೊಳಿಸುವ ಸಂಬಂಧ  ಸರ್ಕಾರದ ಅಧಿಕೃತ ಆದೇಶ ಸದ್ಯದಲ್ಲಿಯೇ ಹೊರಬೀಳಲಿದೆ. ಶಂಕರ್ ಬಿದರಿಯ ನಂತರ ಕಿಶೋರ್ ಚಂದ್ರ ಮತ್ತೋರ್ವ ಕನ್ನಡಿಗ ಪೊಲೀಸ್ ಮಹಾನಿರ್ದೇಶಕರಾಗಲಿದ್ದಾರೆ. ಕಿಶೋರ್ ಚಂದ್ರ ಅವರು ಡಿಜಿಪಿಯಾಗುವುದರಿಂದ ಮಹಿಳಾ ಅಧಿಕಾರಿಯೋರ್ವರಿಗೆ ರಾಜ್ಯದ ಪೊಲೀಸ್ ಮಹಾನಿರ್ದೇಶಕಾಗುವ ಅವಕಾಶ ತಪ್ಪಿದಂತಾಗಿದೆ. ಸೇವಾಹಿರಿತನ ಬದಿಗಿಟ್ಟು ಕನ್ನಡಿಗರನ್ನೇ ನೇಮಿಸುತ್ತಿರುವುದರಿಂದ ನೀಲಮಣಿ ರಾಜು ಸರ್ಕಾರದ ನಡೆ ಖಂಡಿಸಿ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

 

 

 

Get Latest updates on WhatsApp. Send ‘Add Me’ to 8550851559

Loading...