ಸಾಮಾಜಿಕ ಜಾಲತಾಣಗಳ ಅನ್ವೇಷಣೆ ಮಾತ್ರ ನಮ್ಮಿಂದ ಸಾಧ್ಯವಾಗಿಲ್ಲ : ಪ್ರಕಾಶ್‌ ಜಾವಡೇಕರ್‌ ಬೇಸರ – News Mirchi

ಸಾಮಾಜಿಕ ಜಾಲತಾಣಗಳ ಅನ್ವೇಷಣೆ ಮಾತ್ರ ನಮ್ಮಿಂದ ಸಾಧ್ಯವಾಗಿಲ್ಲ : ಪ್ರಕಾಶ್‌ ಜಾವಡೇಕರ್‌ ಬೇಸರ

ಬೆಂಗಳೂರು :  ನವಭಾರತ ನಿರ್ಮಾಣದ ಕುರಿತು ಸಂಶೋಧನೆ ಮತ್ತು ಅನ್ವೇಷಣೆಗಳು ನಡೆಯಬೇಕು. ಇದಕ್ಕಾಗಿ ವಿದ್ಯಾರ್ಥಿಗಳ ಕೌಶಲ ಮತ್ತು ಜಾಣ್ಮೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದರು.

ಬೆಂಗಳೂರಿನ ಯಲಹಂಕದ ರೇವಾ ವಿಶ್ವವಿದ್ಯಾನಿಲಯದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಬ್ಲಾಕ್ ಉದ್ಘಾಟಿಸಿ ಮಾತನಾಡಿದ ಅವರು ವಿದೇಶಗಳಲ್ಲಿ ನಡೆಯುವ ಪ್ರಮುಖ ಸಂಶೋಧನೆಗಳಲ್ಲಿ ಭಾರತೀಯರಿರುತ್ತಾರೆ. ಆದರೆ ಫೇಸ್ ಬುಕ್, ಟ್ವೀಟರ್, ಗೂಗಲ್ ನಂತಹ ಸಾಮಾಜಿಕ ಜಾಲತಾಣಗಳ ಅನ್ವೇಷಣೆ ಮಾತ್ರ ನಮ್ಮಿಂದ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಉನ್ನತ ಶಿಕ್ಷಣದಲ್ಲಿ ವಿಶೇಷವಾಗಿ ಸಂಶೋಧನೆ, ಅನ್ವೇಷಣೆ ಮತ್ತು ಅಭಿವೃದ್ಧಿಗೆ ಒತ್ತು ನೀಡುತ್ತಿದೆ. 20ವಿಶ್ವದರ್ಜೆಯ ವಿವಿಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು. ಉನ್ನತ ಶಿಕ್ಷಣ ನೋಂದಣಿ ಪ್ರಮಾಣ ಶೇ.25ರಷ್ಟಿದ್ದು, 2025ರ ವೇಳೆಗೆ ಈ ಪ್ರಮಾಣ ಶೇ.50ನ್ನು ತಲುಪಲು ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳಿಂದ ತಿರಸ್ಕೃತಗೊಂಡಿರುವ 500 ಇಂಜಿನಿಯರಿಂಗ್  ಕಾಲೇಜುಗಳನ್ನು ರದ್ದುಗೊಳಿಸಲು ಪ್ರಸ್ತಾಪಿಸಲಾಗಿದೆ ಎಂದರು.

 

 

 

 

Get Latest updates on WhatsApp. Send ‘Add Me’ to 8550851559

Loading...