ರಾಜ್ಯದಲ್ಲಿ ಮೋದಿ ಅಲೆ ಕೆಲಸ ಮಾಡಲಾರದು : ಸಿಎಂ ಸಿದ್ದರಾಮಯ್ಯ – News Mirchi

ರಾಜ್ಯದಲ್ಲಿ ಮೋದಿ ಅಲೆ ಕೆಲಸ ಮಾಡಲಾರದು : ಸಿಎಂ ಸಿದ್ದರಾಮಯ್ಯ

ಚಿಕ್ಕ ಬಳ್ಳಾಪುರ :  ಬಿಜೆಪಿಯವರು ತಮ್ಮ ಅಧಿಕಾರಾವಧಿಯಲ್ಲಿ ತಾವೇ ಪರಿವರ್ತನೆಯಾದರು. ಅದರಿಂದ ಅವರು ಯಾವ ಯಾತ್ರೆಯನ್ನು ಮಾಡಿದರೂ ಜನ ಬದಲಾಗುವುದಿಲ್ಲ. ಜನ ಅವರ ವಿರುದ್ಧವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಇಲ್ಲಿನ ಕಾರ್ಯಕ್ರಮವೊಂದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಮೋದಿ ಅಲೆ ಕೆಲಸ ಮಾಡಲಾರದು. ಅವರು ರಾಜ್ಯಕ್ಕೆ ಬಂದ ತಕ್ಷಣ ಜನರ ಮನೋಭಾವ ಬದಲಾಗುವುದಿಲ್ಲ. ಜನರ ಭಾವನೆ ಬದಲಿಸಲು ಅವರೇನು ಮಂತ್ರ ದಂಡ  ಇಟ್ಟುಕೊಂಡಿದ್ದಾರಾ? ಅಥವಾ ಮ್ಯಾಜಿಕ್ ಮಾಡ್ತಾರಾ ಎಂದು ಪ್ರಶ್ನಿಸಿದರು. ಪಿ.ಜಿ.ಆರ್.ಸಿಂಧ್ಯಾ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆಂಬುದು ಸುಳ್ಳು ಸುದ್ದಿ. ಅವರಿಗೂ ವರುಣಾ ಕ್ಷೇತ್ರಕ್ಕೂ ಏನು ಸಂಬಂಧವಿದೆ. ಇದು ಹೇಗೆ ಸುದ್ದಿಯಾಗುತ್ತಿದೆಯೋ ಗೊತ್ತಿಲ್ಲ ಎಂದರು.

 

 

 

 

 

Get Latest updates on WhatsApp. Send ‘Add Me’ to 8550851559

Loading...