ರಿಯಲ್ ಸ್ಟಾರ್  ಉಪೇಂದ್ರ ನೇತೃತ್ವದ ಹೊಸ ಪಕ್ಷಕ್ಕೆ ಚಾಲನೆ – News Mirchi

ರಿಯಲ್ ಸ್ಟಾರ್  ಉಪೇಂದ್ರ ನೇತೃತ್ವದ ಹೊಸ ಪಕ್ಷಕ್ಕೆ ಚಾಲನೆ

ಬೆಂಗಳೂರು : ಇಲ್ಲಿನ ಗಾಂಧಿ ಭವನದಲ್ಲಿ ರಿಯಲ್ ಸ್ಟಾರ್  ಉಪೇಂದ್ರ ನೇತೃತ್ವದ ಹೊಸ ಪಕ್ಷ  ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಉದ್ಘಾಟನೆ ಕಾರ್ಯಕ್ರಮಕ್ಕೆ ಪತ್ರಕರ್ತರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ನಟ ಉಪೇಂದ್ರ ತನ್ನ ನೂತನ ಪಕ್ಷದ ಚಿಂತನೆಯ ಕುರಿತು ಮಾತನಾಡಿದರು.  ಎಲ್ಲರಿಗೂ ಉಚಿತ ಆರೋಗ್ಯ ವಿಮೆ, ಉಚಿತ ಶಿಕ್ಷಣ ಹಾಗೂ ಮೂಲ ಸೌಕರ್ಯ ವ್ಯವಸ್ಥೆ, ಕೃಷಿ ಸೇರಿ ಎಲ್ಲ ವಲಯದಲ್ಲಿಯೂ ಸಂಪೂರ್ಣ ಬದಲಾವಣೆ ತರುವ ಉದ್ದೇಶವಿದೆ. ಚುನಾವಣೆಯಲ್ಲಿ ಗೆದ್ದ ನಂತರವೂ ನಾಯಕರು ದುಡಿಯಬೇಕು ಎಂದರು.  224 ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುವ ಯೋಜನೆಯಿದೆ. ಯಶ್, ಹಾಗೂ ಶಿವರಾಜ್ ಕುಮಾರ್ ಸೇರಿ ಹಲವು ಕಲಾವಿದರು ಪಕ್ಷ ಹಾಗೂ ಮುಂದಿನ ನಡೆಯ ಕುರಿತು ಚರ್ಚಿಸಿದ್ದಾರೆ. ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ತಿಳಿಸಿದರು.

 

 

 

 

Get Latest updates on WhatsApp. Send ‘Add Me’ to 8550851559

Loading...