ಗುಂಡಿ ಮುಚ್ಚುವ ನೆಪದಲ್ಲಿ ಸಾವಿರಾರು ಕೋಟಿರೂ.ಹಗಲು ದರೋಡೆ : ಬಿ.ಎಸ್.ಯಡಿಯೂರಪ್ಪ ಆರೋಪ – News Mirchi

ಗುಂಡಿ ಮುಚ್ಚುವ ನೆಪದಲ್ಲಿ ಸಾವಿರಾರು ಕೋಟಿರೂ.ಹಗಲು ದರೋಡೆ : ಬಿ.ಎಸ್.ಯಡಿಯೂರಪ್ಪ ಆರೋಪ

ತುಮಕೂರು :  ಗುಂಡಿ ಮುಚ್ಚುವ ನೆಪದಲ್ಲಿ ಸಾವಿರಾರು ಕೋಟಿರೂ.ಹಗಲು ದರೋಡೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಾರ್ಜ್ ಹಗರಣಗಳನ್ನು ಬಯಲು ಮಾಡುತ್ತೇವೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಗಳನ್ನು ಭೇಟಿ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಸಿದ್ದರಾಮಯ್ಯ ಸೊಕ್ಕಿನಿಂದ ಮೆರೆದು ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ.ನನ್ನ ಕಂಡ್ರೆ ಪ್ರಧಾನಿ ಅವರಿಗೆ ಭಯ ಅಂತ ಹೇಳಿದ್ದಾರೆ. ಇದು ಮೂರ್ಖತನದ ಪರಮಾವಧಿ. ಪ್ರಧಾನಿಗಳು ಧರ್ಮಸ್ಥಳಕ್ಕೆ ಹೋದಾಗ ಭಯಭಕ್ತಿ ಉಪವಾಸ ಇದ್ದರು. ಆದರೆ ಸಿದ್ದರಾಮಯ್ಯ ನಾನು ಮೀನು ಕೋಳಿ ತಿಂದು ಹೋಗಿದ್ದೆ ಎಂದು ಭಕ್ತರಿಗೆ ಅವಮಾನ ಮಾಡಿದ್ದಾರೆ. ಇಂತಹ ಮುಖ್ಯಮಂತ್ರಿಯನ್ನು ನಾಡಿನ ಜನ ಪಡೆದಿರುವುದು ನೋವಿನ ಸಂಗತಿ ಎಂದರು.

ಪರಿವರ್ತನಾ ರ್ಯಾಲಿಯಲ್ಲಿ ಶಾಸಕ ಸಿ.ಪಿ.ಯೋಗೃಶ್ವರ್ ಹಾಗೂ ಕುಡಚಿ ಶಾಸಕ ಪಿ.ರಾಜೀವ್ ಬಿಜೆಪಿ ಸೇರಲಿದ್ದಾರೆಂದು ತಿಳಿಸಿದರು.

 

 

Get Latest updates on WhatsApp. Send ‘Add Me’ to 8550851559

Loading...