ಸಿಎಂ ಭೇಟಿ ಮಾಡಿದ ಮಠಾಧೀಶರನ್ನೊಳಗೊಂಡ ನಿಯೋಗ – News Mirchi

ಸಿಎಂ ಭೇಟಿ ಮಾಡಿದ ಮಠಾಧೀಶರನ್ನೊಳಗೊಂಡ ನಿಯೋಗ

ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದಲಿತ ಹಾಗೂ ಹಿಂದುಳಿದ ಸಮುದಾಯಗಳ ಮಠಾಧೀಶರನ್ನೊಳಗೊಂಡ ನಿಯೋಗ ಭೇಟಿ ಮಾಡಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದೆ.

ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರನ್ನು ಸಮಾಜಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ನೇತೃತ್ವದ ಹಿಂದುಳಿದ ಮತ್ತು ದಲಿತ ಸಮುದಾಯದ ಮಠಾಧೀಶರ ಒಕ್ಕೂಟದ 35 ರಿಂದ 40 ಮಠಾಧೀಶರನ್ನೊಳಗೊಂಡ ನಿಯೋಗ ಭೇಟಿಯಾಗಿ ಸಮಸ್ಯೆಗಳ ಮನವರಿಕೆ ಮಾಡಿಕೊಟ್ಟಿತು. ನಿಮ್ಮ ದೃಢಸಂಕಲ್ಪವನ್ನು ಮುಂದುವರಿಸಿ ಅಹಿಂದ ಸಮುದಾಯಗಳ ಸರ್ವಾಂಗೀಣ ಏಳ್ಗೆಗಾಗಿ ನಿಮ್ಮ ಪ್ರಯತ್ನ ಮುಂದುವರಿಸಿ ಎಂದು ಹೇಳಿದರು. ಅಹಿಂದ ಸಮುದಾಯಗಳ ಮಠಗಳ ಬೇಡಿಕೆ ಮತ್ತು ಸಮುದಾಯಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮನವಿ ಪತ್ರ ಸಲ್ಲಿಸಿದರು.  ದಲಿತ ಮತ್ತು ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

 

 

 

Get Latest updates on WhatsApp. Send ‘Add Me’ to 8550851559

Loading...