ಜನಸಂಪರ್ಕ ಮೊಬೈಲ್  ಆ್ಯಪ್ ಬಿಡುಗಡೆಗೊಳಿಸಿದ ಸಿಎಂ – News Mirchi

ಜನಸಂಪರ್ಕ ಮೊಬೈಲ್  ಆ್ಯಪ್ ಬಿಡುಗಡೆಗೊಳಿಸಿದ ಸಿಎಂ

ಬೆಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸೌಧದಲ್ಲಿ ತಮ್ಮನ್ನು ನೇರವಾಗಿ ಸಂಪರ್ಕಿಸುವ ಜನಸಂಪರ್ಕ ಮೊಬೈಲ್  ಆ್ಯಪ್ ಹಾಗೂ ರೈತರ ಸಮೀಕ್ಷೆ ಕುರಿತು ಮಾಹಿತಿ ನೀಡುವ ಆ್ಯಪ್ ಗಳನ್ನು ಲೋಕಾರ್ಪಣೆ ಮಾಡಿದರು. ಮುಖ್ಯಮಂತ್ರಿಗಳೊಂದಿಗೆ ನೇರಸಂಪರ್ಕ ಸಾಧಿಸಲು’ ದಿ ಸಿಟಿಜನ್ ಕನೆಕ್ಟ್ ಆ್ಯಪ್’ ಎಂಬ ಹೆಸರಿನ ಈ ಆ್ಯಪ್ ನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ನೇರ ಸಂಪರ್ಕ ಸಾಧಿಸಬಹುದಾಗಿದೆ.

ಕಚೇರಿಯ ಕ್ಷಣಕ್ಷಣದ ಸುದ್ದಿಗಳು, ಮುಖ್ಯಮಂತ್ರಿಗಳ ಬ್ಲ್ಯಾಗ್ ಅವರ ಭಾಷಣ, ಸಂದರ್ಶನಗಳ ಮಾಹಿತಿ ಲಭ್ಯವಿದೆ. ಜತೆಗೆ ಮುಖ್ಯಮಂತ್ರಿಗಳು ನಾಗರಿಕರೊಂದಿಗೆ ನೇರ ಸಂವಾದ ನಡೆಸಲು ಅವಕಾಶವಿದೆ. ಸರ್ಕಾರದ ಇಲಾಖೆಗಳ ಸಲಹೆ, ಕಾಳಜಿಗಳನ್ನು ಹಂಚಿಕೊಳ್ಳಲು ಅವಕಾಶವಿದೆ. ಮುಖ್ಯಮಂತ್ರಿಗಳ ಕಾರ್ಯಕ್ರಮ ವಿವರ, ಸಾಮಾಜಿಕ ಜಾಲತಾಣಗಳ ಮೂಲಕ ಅವರ ಸಂಪರ್ಕ ಮತ್ತಿತರ ಮಾಹಿತಿಗಳು ಈ ಆ್ಯಪ್ ನಲ್ಲಿ ಲಭ್ಯವಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

 

 

 

Get Latest updates on WhatsApp. Send ‘Add Me’ to 8550851559

Loading...