ವಿದ್ಯಾರ್ಥಿಗಳ ಮೇಲೆ ವರ್ಣದ್ವೇಷದ ಹಲ್ಲೆ : ವಿಷಯಗಳನ್ನು ಪರಿಶೀಲಿಸಲಾಗುತ್ತಿದೆ ಸುಷ್ಮಾಸ್ವರಾಜ್ – News Mirchi

ವಿದ್ಯಾರ್ಥಿಗಳ ಮೇಲೆ ವರ್ಣದ್ವೇಷದ ಹಲ್ಲೆ : ವಿಷಯಗಳನ್ನು ಪರಿಶೀಲಿಸಲಾಗುತ್ತಿದೆ ಸುಷ್ಮಾಸ್ವರಾಜ್

ಮಿಲಾನ್ : ಇಲ್ಲಿನ ಕೆಲವು ವಿದ್ಯಾರ್ಥಿಗಳ ಮೇಲೆ ವರ್ಣದ್ವೇಷದ ಹಲ್ಲೆಗಳು ನಡೆದಿದ್ದು, ಭಾರತೀಯ ದೂತಾವಾಸ ಈ ಕುರಿತು ಎಚ್ಚೆತ್ತುಕೊಂಡು ಭೀತಿಗೊಳಗಾಗಿರುವ ವಿದ್ಯಾರ್ಥಿಗಳನ್ನು ಸಂಪರ್ಕಿಸಿದೆ.

ತಮಗೂ ಮಾಹಿತಿ ಬಂದಿದ್ದು ವೈಯುಕ್ತಿಕವಾಗಿ ಗಮನಹರಿಸಿ ವಿಷಯಗಳನ್ನು ಪರಿಶೀಲಿಸುತ್ತಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಗಾಬರಿಯಾಗಬೇಕಿಲ್ಲ. ಈ ವಿಷಯವನ್ನು ಅತ್ಯುನ್ನತ ಮಟ್ಟದ ಕಾನೂನು, ಶಾಂತಿಪಾಲನೆ ಅಧಿಕಾರಿಗಳು ಪರಿಶೀಲಿಸಿದ್ದು ಅಂಥ ಯಾವುದೇ ಘಟನೆ ನಡೆದರೂ ಕೂಡಲೇ ಭಾರತೀಯ ದೂತಾವಾಸಕ್ಕೆ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ಹೇಳಲಾಗಿದೆ. ವಿದ್ಯಾರ್ಥಿಗಳು ಹೊರಗಡೆ ಹೋದಾಗ ಪರಸ್ಪರ ದೂತಾವಾಸದೊಡನೆ ಸಂಪರ್ಕದಲ್ಲಿರುವಂತೆಯೂ ಹೇಳಲಾಗಿದೆ ಎಂದು ತಿಳಿದು ಬಂದಿದೆ.

 

 

 

Get Latest updates on WhatsApp. Send ‘Add Me’ to 8550851559

Loading...