ತಿನ್ನುವಾಗ ಗಂಟಲಲ್ಲಿ ಸಿಲುಕಿದ ಚಕ್ಕುಲಿ : ಮಗು ಸಾವು – News Mirchi

ತಿನ್ನುವಾಗ ಗಂಟಲಲ್ಲಿ ಸಿಲುಕಿದ ಚಕ್ಕುಲಿ : ಮಗು ಸಾವು

ಮಂಗಳೂರು :   ಚಕ್ಕುಲಿ ತಿನ್ನುವಾಗ ಆಕಸ್ಮಿಕವಾಗಿ ಗಂಟಲಲ್ಲಿ ಸಿಲುಕಿ ಒಂದು ವರ್ಷದ ಮಗು ಮೃತಪಟ್ಟ ಘಟನೆ ಮಂಗಳೂರಿನ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ವಿಠಲ  ಎಂಬವರ ಪುತ್ರ ಆರುಷ್ ಚಕ್ಕುಲಿ ತಿನ್ನುತ್ತಿದ್ದ.  ಸಡನ್ನಾಗಿ ಅದು ಗಂಟಲಲ್ಲಿ ಸಿಲುಕಿದೆ.  ಚಿಕ್ಕ ಮಗುವಾದ್ದರಿಂದ ಉಸಿರಾಡಲು ಕಷ್ಟವಾಗಿದೆ. ಇದರಿಂದ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಎಳೆಯ ಕಂದಮ್ಮನನ್ನು ಕಳೆದುಕೊಂಡ ಮನೆಯಲ್ಲಿ ಶೋಕ ಆವರಿಸಿದೆ.

 

 

 

 

 

Get Latest updates on WhatsApp. Send ‘Add Me’ to 8550851559

Loading...