ನಗರದಲ್ಲಿ ಕಳ್ಳರ ಹಾವಳಿ : ಮಹಿಳೆಯರ ಸರ ಕಸಿದು ಪರಾರಿ – News Mirchi

ನಗರದಲ್ಲಿ ಕಳ್ಳರ ಹಾವಳಿ : ಮಹಿಳೆಯರ ಸರ ಕಸಿದು ಪರಾರಿ

ಬೆಂಗಳೂರು :  ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ತಲೆ ಎತ್ತಿದೆ. ಜೆಪಿ ನಗರದ ಎರಡು ಕಡೆಗಳಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಇಬ್ಬರು ಮಹಿಳೆಯರ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ.

ಜೆಪಿನಗರದ 2ನೇ ಹಂತದ 5ನೇ ಕ್ರಾಸ್‌ನಲ್ಲಿ ಹಾಲು ತೆಗೆದುಕೊಂಡು ಮನೆಗೆ ಹೋಗುತ್ತಿದ್ದ ಜಯಲಕ್ಷ್ಮಮ್ಮ ಅವರ ಕತ್ತಿನಲ್ಲಿದ್ದ 25 ಗ್ರಾಂ ತೂಕದ ಮಾಂಗಲ್ಯ ಸರವನ್ನು ಹಿಂದಿನಿಂದ ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.  ಘಟನೆ ನಡೆದು ಕೆಲವೇ ನಿಮಿಷಗಳಲ್ಲಿ ಪಕ್ಕದ ರಸ್ತೆಗೆ ಹೋದ ದುಷ್ಕರ್ಮಿಗಳು ರಾತ್ರಿ ಉಳಿದಿದ್ದ ಅನ್ನವನ್ನು ಕಸಕ್ಕೆ ಹಾಕಿ ಮನೆಗೆ ಹೋಗುತ್ತಿದ್ದ ಲಕ್ಷ್ಮಮ್ಮ ಎಂಬ ಮಹಿಳೆಯ 50 ಗ್ರಾಂ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಕಳ್ಳರ ಕೃತ್ಯಗಳು ಸಿಸಿ ಕ್ಯಾಮರಾದಿಂದ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿರುವ ಜೆಪಿನಗರ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರಶೋಧ ನಡೆಸಿದ್ದಾರೆ.

 

 

 

 

Get Latest updates on WhatsApp. Send ‘Add Me’ to 8550851559

Loading...