ಸಿನಿಮಾ ನಟರು ಪಕ್ಷ‌ ಮಾಡಿದ ಆ ಬಳಿಕ ಏನೇನೋ ಆಗಿದ್ದಾರೆ : ವಿನಯ್ ಕುಲಕರ್ಣಿ ವ್ಯಂಗ್ಯ – News Mirchi

ಸಿನಿಮಾ ನಟರು ಪಕ್ಷ‌ ಮಾಡಿದ ಆ ಬಳಿಕ ಏನೇನೋ ಆಗಿದ್ದಾರೆ : ವಿನಯ್ ಕುಲಕರ್ಣಿ ವ್ಯಂಗ್ಯ

ಧಾರವಾಡ :  ಉಪೇಂದ್ರ ಹೊಸ ಪಕ್ಷ ಘೋಷಣೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ವಿನಯ್ ಕುಲಕರ್ಣಿ ಬಹಳ ಜನ ಸಿನಿಮಾ ನಟರು ಪಕ್ಷ‌ ಮಾಡಿದ ಆ ಬಳಿಕ ಏನೇನೋ ಆಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು  ಈ ಹಿಂದೆ ಚಿರಂಜೀವಿ ಸಹ ಪಕ್ಷ ಮಾಡಿದ್ದರು. ಆ ಬಳಿಕ ಏನಾಯಿತು ಅನ್ನೋದು ಜನರಿಗೆ ಗೊತ್ತಿದೆ ಎಂದಿದ್ದಾರೆ.  ಅಲ್ಪಸಂಖ್ಯಾತರಿಂದಲೇ ಸ್ಥಾನಮಾನ‌ ಪಡೆದಿರುವ ಅಮಿತ್ ಷಾ ಲಿಂಗಾಯತ ಧರ್ಮ ವಿಷಯದಲ್ಲಿ ಬಿಜೆಪಿ ಮುಖಂಡರನ್ನು ಡಬ್ಬಿಯೊಳಗೆ ಹತ್ತಿಕ್ಕಿ ಇಡುತ್ತಿದ್ದಾರೆ. ಭಾರತದಲ್ಲಿ ಇರುವವರೆಲ್ಲ ಹಿಂದೂಗಳೇ, ಪ್ರತ್ಯೇಕ ಲಿಂಗಾಯತ ಧರ್ಮ ಮಾಡುವುದರಿಂದ ಹಿಂದೂತ್ವಕ್ಕೆ ಯಾವುದೇ ಧಕ್ಕೆಯಾಗದು. ಬಿಜೆಪಿಯವರು ಒಣ ರಾಜಕೀಯ ಮಾಡೋದು ಬಿಟ್ಟು ಮಹದಾಯಿ ವಿಷಯದಲ್ಲಿ‌ ಮಾತುಕತೆ ಮಾಡಲು ಕಾಳಜಿ ತೋರಬೇಕು ಎಂದಿದ್ದಾರೆ.

 

 

Get Latest updates on WhatsApp. Send ‘Add Me’ to 8550851559

Loading...