32 ಜಿಬಿ ಸ್ಟೋರೇಜ್‌ನ ಬಡ್ಜೆಟ್ ಫೋನ್ |News Mirchi

32 ಜಿಬಿ ಸ್ಟೋರೇಜ್‌ನ ಬಡ್ಜೆಟ್ ಫೋನ್

​ಸ್ವದೇಶೀ ಮೊಬೈಲ್ ತಯಾರಿಕಾ ಕಂಪನಿ ‘ಲಾವಾ’ ಗುರುವಾರ ತನ್ನ ಹೊಸ ಸ್ಮಾರ್ಟ್ ಫೋನ್ ‘ಲಾವಾ ಎಕ್ಸ್50 ಪ್ಲಸ್’ ಬಿಡುಗಡೆ ಮಾಡಿತು. 5.5 ಇಂಚು ಡಿಸ್ ಪ್ಲೇ, ಡ್ಯುಯಲ್ ಸಿಮ್, 1.3 GHz ಕ್ವಾಡ್ ಕೋರ್ ಪ್ರೊಸೆಸರ್, 2 ಜಿಬಿ ರ‌್ಯಾಮ್, 32 ಜಿಬಿ ಇಂಟರ್ನಲ್ ಸ್ಟೋರೇಜ್ ಅನ್ನು ಈ ಸ್ಮಾರ್ಟ್ ಫೋನ್ ಹೊಂದಿದೆ. ಅಂದ ಹಾಗೆ ಇದರ ಬೆಲೆ ರೂ. 9,199.
ಈ ಬೆಲೆಗೆ 32 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರುವ ಏಕೈಕ ಸ್ಮಾರ್ಟ್ ಫೋನ್ ‘ಲಾವಾ ಎಕ್ಸ್50 ಪ್ಲಸ್’.
4ಜಿ-ವೋಲ್ಟ್ ಸ್ಮಾರ್ಟ್ ಫೋನ್ ಇದಾಗಿದ್ದು, 8 ಎಂ.ಪಿ ಹಿಂಬದಿ ಕ್ಯಾಮೆರಾ, 5 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ (ಎಲ್‌ಇಡಿ ಫ್ಲ್ಯಾಷ್ ನೊಂದಿಗೆ) ಹೊಂದಿದೆ.
ಭಾರತದ 11 ಭಾಷೆಗಳಿಗೆ ಸಪೋರ್ಟ್ ಮಾಡುವ ಈ ಸ್ಮಾರ್ಟ್ ಫೋನ್, ಇಂಗ್ಲೀಷ್ ನಿಂದ 11 ಭಾಷೆಗಳಿಗೆ ಅನುವಾದ ಮಾಡುವ ವೈಶಿಷ್ಟ್ಯತೆ ಹೊಂದಿದೆ.

Loading...
loading...
error: Content is protected !!