ಆಡಳಿತ ಪಕ್ಷದಿಂದ 33 ಶಾಸಕರು ಜಂಪ್

ಅರುಣಾಚಲ ಪ್ರದೇಶದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ಆಗಿದೆ. ಇಲ್ಲಿಯವರೆಗೆ ಆಡಳಿತದಲ್ಲಿದ್ದ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ ಪ್ರದೇಶ (ಪಿಪಿಎ) ಪಕ್ಷಕ್ಕೆ ಇದೊಂದು ರೀತಿಯ ಶಾಕ್. ಶನಿವಾರ ಆ ಪಕ್ಷದ 33 ಶಾಸಕರು ಬಂಡಾಯವೆದ್ದು ಬಿಜೆಪಿ ಸೇರಿದರು. ಹೀಗಾಗಿ 60 ಸದಸ್ಯ ಬಲದ ವಿಧಾನಸಭೆಯಲ್ಲಿ ಪಿಪಿಎ ನ ಕೇವಲ 10 ಶಾಸಕರು ಉಳಿದಿದ್ದಾರೆ.

ಅರುಣಾಚಲ ಪ್ರದೇಶದ ಮುಖ್ಯ ಮಂತ್ರಿ ಪೆಮಾ ಖಂಡು ಮತ್ತು ಇತರ ಆರು ಶಾಸಕರನ್ನು ಪಿಪಿಎ ಅಮಾನತು ಮಾಡಿದ್ದರಿಂದ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ನಾಯಕತ್ವ ಬದಲಾವಣೆ ಅನಿವಾರ್ಯ ಎಂದು ಪಿಪಿಎ ಹೇಳಿತ್ತು. ಆದರೆ ಮುಖ್ಯಮಂತ್ರಿ ಖಂಡು ಹೇಳಿದಂತೆ ಅವರು ಅವರ ಬೆಂಬಲಿಗರೊಂದಿಗೆ ಬಂಡಾಯವೆದ್ದ ಕಾರಣ ಪಿಪಿಎ ಗೆ ಭರಿಸಲಾರದ ಹೊಡೆತ ಬಿದ್ದಿದೆ.

ಖಂಡೂ ಸೇರಿದಂತೆ 33 ಶಾಸಕರು‌ ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಕೂಡಾ ಖಂಡೂ ಅವರಿಗೇ ಬೆಂಬಲ ವ್ಯಕ್ತಪಡಿಸಿದೆ. ಈಗಾಗಲೇ ಬಿಜೆಪಿ 12 ಶಾಸಕರ ಬಲ ಹೊಂದಿದ್ದು, ಪೆಮಾ ಖಂಡು ಸರ್ಕಾರಕ್ಕೆ ವಿಧಾನಸಭೆಯಲ್ಲಿ ಬಹುಮತ ಲಭಿಸಿದಂತಾಗಿದೆ.

Loading...

Leave a Reply

Your email address will not be published.

error: Content is protected !!