ಜಯಾ ಹಿಂಬಾಲಿಸಿದವರು 36

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನದ ಸುದ್ದಿ ಕೇಳಿ ತಮಿಳುನಾಡಿನಲ್ಲಿ 36 ಜನ ಸಾವನ್ನಪ್ಪಿದ್ದಾರೆ. ಇವರಲ್ಲಿ 31 ಜನ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, ಐದು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮವಾರ ರಾತ್ರಿಯಿಂದಲೇ ಆತಂಕದಿಂದ ಇದ್ದ ಅರುಂಬು ಕೋಟೈನ ಸುಬ್ಬುರಾಜ್(42) ಎಂಬ ಎಐಎಡಿಎಂಕೆ ಕಾರ್ಯಕರ್ತ ಮಂಗಳವಾರ ಬೆಳಗ್ಗೆ ಕೆಲಸಕ್ಕೆ ಬಂದ ನಂತರ ಅಲ್ಲಿನ ತೋಟದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವೇದಾರಣ್ಯಂ ನ ಕಾಳಿಯಪ್ಪನ್(77) ಎಂಬಾತನೂ ಕೀಟನಾಶಕ ಸೇವಿಸಿ ಸಾವನ್ನಪ್ಪಿದ್ದಾನೆ. ಕೊಯಂಬತ್ತೂರಿನ ಹರಿಜನ ಕಾಲನಿಯ ವಡಿವೇಲು ಎಂಬ ಚಾಲಕ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

Related News

Comments (wait until it loads)
Loading...
class="clear">