ಆ ರೈತನ ಬಳಿ 37 ಬ್ಯಾಂಕ್ ಪಾಸ್ ಬುಕ್, 44 ಎಟಿಎಂ ಕಾರ್ಡ್!

ಸ್ವಯಂ ಪ್ರೇರಿತರಾಗಿ ಆದಾಯ ಘೋಷಣೆ ಯೋಜನೆಯಡಿಯಲ್ಲಿ ಇತರರ ಕಪ್ಪು ಹಣವನ್ನು ಕಮೀಷನ್ ಆಸೆಗೆ ಅಧಿಕೃತಗೊಳಿಸಲು ಗುಜರಾತ್ ವ್ಯಾಪಾರಿ ಮಹೇಶ್ ಶಾ ಪ್ರಯತ್ನಿಸಿ ಜೈಲು ಕಂಬಿ ಎಣಿಸುತ್ತಿರುವ ನಡುವೆಯೇ, ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಅಸ್ಸಾಂನ ರೈತ ಜಿಂಟೂ ಬೋರಾ ಎಂಬಾತನ ಬಳಿ 37 ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಪಾಸ್ ಬುಕ್‌ಗಳು, 44 ಎಟಿಎಂ ಕಾರ್ಡುಗಳು ಪತ್ತೆಯಾಗಿವೆ.

ಮಜುಲೀ ಜಿಲ್ಲೆ ಮಧುಪೂರ್ ಗ್ರಾಮದ ರೈತ ಬೋರಾ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರಿಗೆ 44 ಎಟಿಎಂ ಕಾರ್ಡುಗಳು, 37 ಪಾಸ್ ಬುಕ್‌ಗಳು, 200 ಬ್ಲಾಂಕ್ ಚೆಕ್ಕುಗಳು, ರೂ.22,380 ನಗದು, ಕೆಲ ಖಾಲಿ ಸ್ಟಾಂಪ್ ಪೇಪರ್ ಗಲು ಪತ್ತೆಯಾಗಿವೆ.

ತಾನು ಹಲವರಿಗೆ ಸಾಲ ನೀಡಿ, ಗ್ಯಾರೆಂಟಿಗಾಗಿ ಪಾಸ್ ಬುಕ್, ಎಟಿಎಂ ಕಾರ್ಡ್ ಒತ್ತೆ ಇಟ್ಟುಕೊಂಡಿರುವುದಾಗಿ ಆತ ಹೇಳಿದ್ದಾನೆ. ಆದರೆ ಬ್ಯಾಂಕುಗಳಲ್ಲಿ ಕಪ್ಪು ಹಣವನ್ನು ಹಾಕಲು ಇದನ್ನೆಲ್ಲಾ ಅತ ಇಟ್ಟುಕೊಂಡಿರಬಹುದು ಎಂದು ಮುಜುಲೀ ಎಸ್ಪಿ ವೈಭವ್ ಚಂದ್ರಕಾಂತ್ ನಿಂಬಾಲ್ಕರ್ ಹೇಳಿದ್ದಾರೆ.

Related News

Loading...

Leave a Reply

Your email address will not be published.

error: Content is protected !!