ನಿನ್ನ ಪ್ರಿಯಕರನನ್ನು ನನಗೆ ಬಿಡು, 1.5 ಕೋಟಿ ಕೊಡ್ತೀನಿ...! |News Mirchi

ನಿನ್ನ ಪ್ರಿಯಕರನನ್ನು ನನಗೆ ಬಿಡು, 1.5 ಕೋಟಿ ಕೊಡ್ತೀನಿ…!

ಇಲ್ಲೊಬ್ಬ ಮಹಿಳೆ ತನ್ನ ತುಂಬಾ ದಿನಗಳ ಗೆಳೆಯನನ್ನು ಮದುವೆಯಾಗ ಬಯಸಿದ್ದಳು. ಆದರೆ ಆತನನ್ನು ಈಗಾಗಲೇ ಮತ್ತೊಬ್ಬ ಯುವತಿ ಪ್ರೀತಿಸುತ್ತಿದ್ದಳು. ಆತನನ್ನು ತಾನು ಮದುವೆಯಾಗಲು ಬಯಸಿರುವುದಾಗಿ, ಆತನನ್ನು ಬಿಟ್ಟು ಬಿಡುವಂತೆ ಆತನ ಪ್ರೇಯಸಿಗೆ ಆ ಮಹಿಳೆ ಒಂದೂವರೆ ಕೋಟಿ ರೂಪಾಯಿಯ ಆಮಿಷವೊಡ್ಡಿದ್ದಾಳೆ. ಈ ಘಟನೆ ಮಲೇಷಿಯಾದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಶ್ರೀಮಂತ ಕುಟುಂಬದ ಮಹಿಳೆ ತಾನು ಇಷ್ಟಪಟ್ಟ ಯುವಕನನ್ನು ಮದುವೆಯಾಗಲು ಏನು ಮಾಡಲೂ ಸಿದ್ಧಳಿದ್ದಳು. ತನ್ನ ಬಾಯ್ ಫ್ರೆಂಡ್ ನ ಪ್ರೇಯಸಿಯನ್ನು ಆತನಿಂದ ದೂರ ಮಾಡಲು ಒಂದೂವರೆ ಕೋಟಿ ರೂಪಾಯಿ ನೀಡುತ್ತೇನೆ, ನಿನ್ನ ಪ್ರಿಯಕರನನ್ನು ನನಗೆ ಬಿಟ್ಟು ಬಿಡು ಎಂದು ಆಫರ್ ನೀಡಿದ್ದಾಳೆ.

ಮಹಿಳೆಯ ಮಾತು ಕೇಳಿದ ಆತನ ಪ್ರೇಯಸಿ, ಖಡಕ್ಕಾಗಿಯೇ ಉತ್ತರಿಸಿದ್ದಾಳೆ. ಈ ವಿಷಯವನ್ನು ಸಾಮಾಜಿಕ ತಾಣದಲ್ಲಿ ಪ್ರಸ್ತಾಪಿಸುತ್ತಾ, ನಿನ್ನ ಒಂದೂವರೆ ಕೋಟಿ ರೂಪಾಯಿ ನನಗೆ ಬೇಕಿಲ್ಲ. ನಾವು ದೂರವಾದರೂ ಆತ ನನ್ನವನು ಎಂಬ ತೃಪ್ತಿ ನನ್ನಲ್ಲಿ ಉಳಿದಿರುತ್ತದೆ. ಅಸಲಿಗೆ ಆತನನ್ನು ನಾನೇಕೆ ಕಳೆದುಕೊಳ್ಳಲಿ? ನಿನಿಗೆ ಹಣವಿದ್ದ ಮಾತ್ರಕ್ಕೆ ನನ್ನ ಪ್ರೀತಿಯನ್ನು ತ್ಯಾಗ ಮಾಡಬೇಕಾ? ಅದೆಲ್ಲಾ ಸರಿ, ನಾನು ಆತನಿಂದ ದೂರವಾಗಲು ಒಂದು ರೇಟು ಫಿಕ್ಸ್ ಮಾಡಿದೆಯಲ್ಲಾ, ನೀನು ಆತನನ್ನು ಪೂರ್ತಿಯಾಗಿ ಬಿಟ್ಟು ಬಿಡಲು ನಿನಗೆಷ್ಟು ಬೇಕು ಹೇಳು ಕೊಡುತ್ತೇನೆ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾಳಂತೆ.

Loading...
loading...
error: Content is protected !!