ಐಸಿಸ್ ನಿಂದ ಅಪಹರಣಗೊಂಡ 39 ಭಾರತೀಯರ ಸುಳಿವು? – News Mirchi

ಐಸಿಸ್ ನಿಂದ ಅಪಹರಣಗೊಂಡ 39 ಭಾರತೀಯರ ಸುಳಿವು?

2014 ರಲ್ಲಿ ಇರಾಕ್ ನಿಂದ ಐಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿದ್ದರು ಎನ್ನಲಾದ 39 ಭಾರತೀಯರು ಉತ್ತರ ಇರಾಕಿನ ಮೊಸೂಲ್ ನಲ್ಲಿರಬಹುದೆಂದು ಸರ್ಕಾರ ಅಪಹರಣಕ್ಕೊಳಗಾಗಿರುವ ವ್ಯಕ್ತಿಗಳ ಕುಟುಂಬಗಳಿಗೆ ತಿಳಿಸಿದೆ.

39 ಭಾರತೀಯರು ಅಪಹರಣಗೊಂಡ ಸ್ಥಳವಾದ ಮೊಸೂಲ್ ನಲ್ಲಿರುವುದಾಗಿ ಸರ್ಕಾರಕ್ಕೆ ಮಾಹಿತಿ ಲಭಿಸಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆನ್ನಲಾಗಿದೆ.

ಅಪಹರಣಗೊಂಡ ಭಾರತೀಯರು ತಮ್ಮ ಕುಟುಂಬಗಳೊಂದಿಗೆ 14ನೇ ಜೂನ್ 2014 ರಂದು ಕೊನೆಯ ಬಾರಿಗೆ ಮಾತನಾಡಿದ್ದರು. ಆ ಸಮಯದಲ್ಲಿ ಅವರನ್ನು ಅಪಹರಿಸಿ ಉಗ್ರರು ಕರೆದೊಯ್ಯುತ್ತಿದ್ದರು. ಆಗ ಉಗ್ರರ ವಶದಲ್ಲಿದ್ದ ಮೊಸೂಲ್ ನಗರವನ್ನು ಈಗ ಇರಾಕ್ ಸೇನೆ ಪುನಃ ವಶಪಡಿಸಿಕೊಂಡಿದೆ.

ಕೇಂದ್ರ ಸರ್ಕಾರ ಇರಾಕ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರ ಸಮಸ್ಯೆಯನ್ನು ಚರ್ಚಿಸಿದ್ದು, ಪರಿಸ್ಥಿತಿ ಸುಧಾರಿಸಿದ ಕೂಡಲೇ ಅವರನ್ನು ಭಾರತಕ್ಕೆ ಕಳುಹಿಸುವ ಭರವಸೆಯನ್ನು ಇರಾಕ್ ಸರ್ಕಾರ ನೀಡಿದೆ ಎಂದು ಸರ್ಕಾರ ಹೇಳಿದೆ.

 

Contact for any Electrical Works across Bengaluru

Loading...
error: Content is protected !!