ಜೇನು ತುಪ್ಪ ಶುದ್ಧ ಎಂದು ತಿಳಿಯಲು 4 ಸುಲಭ ಮಾರ್ಗಗಳು

ಜೇನು ತುಪ್ಪ ಸೇವನೆಯಿಂದ ಆರೋಗ್ಯದ ದೃಷ್ಟಿಯಿಂದ ಹಲವಾರು ಪ್ರಯೋಜನಗಳಿವೆ. ಆದರೆ ನಮಗೆ ಮಾರುಕಟ್ಟೆಯಲ್ಲಿ ಸಿಗುವ ಜೇನು ತುಪ್ಪ ಎಷ್ಟು ಶುದ್ಧ ಎಂಬುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಶುದ್ಧ ಜೇನು ತುಪ್ಪ ಯಾವುದು? ಕಲಬೆರಕೆ ಯಾವುದು ಎಂದು ತಿಳಿದುಕೊಳ್ಳಲು ಇಲ್ಲಿವೆ ಕೆಲವು ಉಪಾಯಗಳು.

ಹತ್ತಿಯನ್ನು ಜೇನು ತುಪ್ಪದೊಳಗೆ ಅದ್ದಿ. ಜೇನು ತುಪ್ಪದೊಳಗೆ ಅದ್ದಿ ತೆಗೆದ ಹತ್ತಿಗೆ ಬೆಂಕಿ ಕಡ್ಡಿ ಗೀರಿ ಹಚ್ಚಿ. ಒಂದು ವೇಳೆ ಅದು ಹೊತ್ತಿಕೊಂಡರೆ ತಿಳಿಯಿರಿ ಅದು ಶುದ್ಧ ಜೇನು ತುಪ್ಪ. ಇಲ್ಲವಾದರೆ ಅದು ಕಲಬೆರಕೆ. ಕಲಬೆರಕೆ ಜೇನು ತುಪ್ಪಕ್ಕೆ ಹೆಚ್ಚು ನೀರು ಬೆರೆಸಿರುತ್ತಾರೆ, ಆದ್ದರಿಂದ ಅದು ಬೆಂಕಿ ಹೊತ್ತಿಕೊಳ್ಳದಂತೆ ಮಾಡುತ್ತದೆ. [ ಚೀನಾದ ಈ ನಕಲಿ ಪದಾರ್ಥಗಳು ನಿಮ್ಮನ್ನು ಕೊಲ್ಲಬಹುದು ]

ಒಂದು ಟೇಬಲ್ ಸ್ಪೂನ್ ಜೇನು ತುಪ್ಪ ತೆಗೆದು ಒಂದು ಲೋಟ ನೀರಿನಲ್ಲಿ ಹಾಕಿ. ಶುದ್ಧ ಜೇನು ತುಪ್ಪ ನೀರಿನೊಂದಿಗೆ ಬೆರೆಯುವುದಿಲ್ಲ. ಅದು ನೀರಿನಲ್ಲಿ ಬೆರೆತರೆ ಅದು ಶುದ್ಧವಲ್ಲ.

ಒಂದು ಟೇಬಲ್ ಸ್ಪೂನ್ ಜೇನು ತುಪ್ಪ ತೆಗೆದು ಸ್ವಲ್ಪ ನೀರಿನಲ್ಲಿ ಬೆರೆಸಿ. ನಂತರ ಸ್ವಲ್ಪ ವಿನೆಗರ್ ಹಾಕಿ. ಆಗ ನೊರೆ ಎದ್ದರೆ ಅದು ಕಲಬೆರಕೆ ಜೇನು ತುಪ್ಪ.

ಗಟ್ಟಿಯಾದ ಬ್ರೆಡ್ ತುಣುಕೊಂದನ್ನು ಒಂದು ಕಪ್ ಜೇನು ತುಪ್ಪದಲ್ಲಿ ಹತ್ತು ನಿಮಿಷ ಇಡಿ. ನಂತರವೂ ಬ್ರೆಡ್ ತುಣುಕಿ ಗಟ್ಟಿಯಾಗೇ ಇದ್ದರೆ ಅದು ಶುದ್ಧ. ಕಲಬೆರಕೆ ಜೇನು ತುಪ್ಪ ಬ್ರೆಡ್ ಅನ್ನು ಮೆದುಗೊಳಿಸುತ್ತದೆ.

Loading...
error: Content is protected !!