ಸಚಿವೆ ಸ್ಮೃತಿ ಇರಾನಿ ಕಾರು ಹಿಂದಿಕ್ಕಲು ಪ್ರಯತ್ನಿಸಿದ ವಿದ್ಯಾರ್ಥಿಗಳ ಬಂಧನ |News Mirchi

ಸಚಿವೆ ಸ್ಮೃತಿ ಇರಾನಿ ಕಾರು ಹಿಂದಿಕ್ಕಲು ಪ್ರಯತ್ನಿಸಿದ ವಿದ್ಯಾರ್ಥಿಗಳ ಬಂಧನ

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಕಾರನ್ನು ಹಿಂಬಾಲಿಸಿ ಹಿಂದಿಕ್ಕಲು ಪ್ರಯತ್ನಿಸಿದ ನಾಲ್ವರು ಕಾಲೇಜು ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶನಿವಾರ ಕುಡಿದು ಜಾಲಿ ರೈಡ್ ಗೆ ರಸ್ತೆಗಿಳಿದಿದ್ದ ನಾಲ್ವರು ಯುವಕರು ಸಚಿವೆಯ ಕಾರನ್ನು ಹಿಂಬಾಲಿಸಿ ಓವರ್ ಟೇಕ್ ಮಾಡಲು ಪ್ರಯತ್ನಿಸಿದ್ದು, ಪೊಲೀಸರಿಗೆ ಕರೆ ಮಾಡಿ ಸಚಿವೆ ದೂರು ನೀಡಿದ್ದರು.

18 ರಿಂದ 19 ವರ್ಷದ ಒಳಗಿನ ಯುವಕರು ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಸ್ನೇಹಿತರೊಬ್ಬರ ಹುಟ್ಟು ಹಬ್ಬದ ಸಮಾರಂಭ ಮುಗಿಸಿಕೊಂಡು, ರಸ್ತೆಯಲ್ಲಿ ಜಾಲಿ ರೈಡ್ ಮಾಡುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Loading...
loading...
error: Content is protected !!