ಮಮತಾಗೆ ದೊಡ್ಡ ಶಾಕ್: ತ್ರಿಪುರದಲ್ಲಿ 400 ಟಿಎಂಸಿ ಮುಖಂಡರು ಬಿಜೆಪಿಗೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ‌ ಕಾಂಗ್ರೆಸ್ ನ ವಿವಿಧ ಕಮಿಟಿ, ಸ್ಥಳೀಯ ಸಂಸ್ಥೆಗಳ ಮುಖಂಡರು ಸೇರಿದಂತೆ ಸುಮಾರು 400 ಜನ ತ್ರಿಪುರದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರ ಬಿಜೆಪಿ ಸೇರ್ಪಡೆಯಿಂದ ತ್ರಿಪುರ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಸೇರಿದವರಲ್ಲಿ 16 ಜನ ಟಿಎಂಸಿ ರಾಜ್ಯ ಸಮಿತಿಯ ಸದಸ್ಯರಾಗಿರುವುದು ಗಮನಾರ್ಹ. ತೃಣಮೂಲ ಕಾಂಗ್ರೆಸ್ ತ್ರಿಪುರ ಘಟಕದ ಮಾಜಿ ಚೇರ್ಮನ್ ರತನ್ ಚಕ್ರವರ್ತಿ ನೇತೃತ್ವದಲ್ಲಿ ಇವರೆಲ್ಲಾ ಟಿಎಂಸಿ ತೊರೆದು ಬಿಜೆಪಿಗೆ ಸೇರಲು ಆಸಕ್ತಿ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವ ರಾಜೆನ್ ಗೊಹೇನ್ ಸ್ವಾಗತಿಸಿದರು. ಸದ್ಯ ದೇಶದಲ್ಲಿ ಅತ್ಯಂತ ಜನಮನ್ನಣೆ ಗಳಿಸಿದ ಏಕೈಕ ಪಕ್ಷ ಬಿಜೆಪಿ, ಹಾಗಾಗಿಯೇ ಬಿಜೆಪಿಗೆ ಬಂದಿದ್ದೇವೆ ಎಂದು ಅವರು ಹೇಳಿದ್ದಾರೆ. ಮುಂದಿನ ವರ್ಷದಲ್ಲಿ ತ್ರಿಪುರದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸುನಾಮಿ ಸೃಷ್ಟಿಸಲಿದೆ ಎಂದು ಗೊಹೇನ್ ಹೇಳಿದ್ದಾರೆ.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache